ಬೀದರ್ : ಶ್ವಾನ ಪ್ರೀಯರಿಗೆ ಪ್ರೋತ್ಸಾಹ ಹಾಗೂ ಅವುಗಳಿಗೆ ಬರುವ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ನಗರದ ನೆಹರು ಸ್ಟೇಡಿಯಂನಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು. ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಸ್ವಿಡ್ಜ್, ಫಗ್, ಪಮೋರಿ, ರಾಟ್ ವಿಲ್ಲರ್, ಡ್ಯಾಷ್ ಹೌಂಡ್, ಮುಧೋಳ ಸೇರಿದಂತೆ ವಿವಿದ ತಳಿಯ 70 ಕ್ಕೂ ಹೆಚ್ಚು ಶ್ವಾನಗಳು ಭಾಗಿಯಾಗಿದ್ದವು.
ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಶ್ವಾನಗಳು ಮಾಲೀಕನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಪ್ರದರ್ಶನ ಪ್ರಾಣಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಮಾಲೀಕ ಹೇಳುವ ಮಾತನ್ನು ಕೇಳುತ್ತಿದ್ದ ಶ್ವಾನಗಳನ್ನು ಕಂಡ ವೀಕ್ಷಕರು ನಾವೂ ನಾಯಿ ಸಾಕಬೇಕು ಅನ್ನುವ ಹಾಗಿತ್ತು ಶ್ವಾನ ಪ್ರದರ್ಶನ.
ಪ್ರದರ್ಶನದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ ಶ್ವಾನಗಳು ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ರಂಜಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡವು.