Tuesday, January 27, 2026
26.9 C
Bengaluru
Google search engine
LIVE
ಮನೆರಾಜ್ಯಹಸಿದವರ ಹೊಟ್ಟೆ ತುಂಬಿಸುತ್ತಿರುವ ಬೀದರ್ ಯುವಕರ ತಂಡ

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಬೀದರ್ ಯುವಕರ ತಂಡ

ಬೀದರ್​ : ಎಷ್ಟೊ ಬಡ ಜನರು ಊಟ ಇಲ್ಲದೆ ಉಪವಾಸ ಮಾಲಗ್ತಾ ಇದ್ದಾರೆ ಊಟ ಮಾಡಲು ಆಹಾರ ಸಿಗುತ್ತಿಲ್ಲ. ತಿಪ್ಪೆಗೆ ಚೆಲ್ಲುವ ಆಹಾರವನ್ನು ಹಸಿದವರಿಗೆ ತಲುಪಿಸಿದರೆ ನೂರಾರು ಜನರ ಹೊಟ್ಟೆ ತುಂಬುತ್ತದೆ ಎಂದು ಯೋಚಿಸಿ ಬೀದರ್​ನ ರೋಹನ್‌ ಕುಮಾರ್‌ ಎಂಬ ಯುವಕ ರಿಶೈನ್‌ ಎಂಬ ಸಂಸ್ಥೆ ಕಟ್ಟಿ ನಿತ್ಯ ನಗರದಲ್ಲಿ ನಡೆಯುವ ನಿಶ್ಚಿತಾರ್ಥ, ಮದುವೆ, ಮುಂಜಿವೆ ಸೇರಿದಂತೆ ಹತ್ತು ಹಲವಾರು ಸಭೆ ಸಮಾರಂಭಗಳಲ್ಲಿ ಹೆಚ್ಚಾಗುವ ಆಹಾರವನ್ನು ರೈಲು ನಿಲ್ದಾಣ, ಬ್ರಿಮ್ಸ್‌ ಆಸ್ಪತ್ರೆ ಸುತ್ತಮುತ್ತ ಹಸಿವಿನಿಂದ ಮಲಗುವ  ಜನರನ್ನು ಎಬ್ಬಿಸಿ ಆಹಾರ ಕೊಡುತ್ತಿದ್ದಾರೆ.

‘ಜಿಲ್ಲೆಯ ಕಲ್ಯಾಣ ಮಂಟಪಗಳಲ್ಲಿ ನಿತ್ಯ ಹೆಚ್ಚಾಗುವ ಆಹಾರವನ್ನು ಸಂಗ್ರಹಿಸಿ ಅದನ್ನು ಸ್ಲಂಗಳಲ್ಲಿ ಸಮರ್ಪಕವಾಗಿ ಪೂರೈಸಿದರೆ ಒಂದು ಬಡ ಕುಟುಂಬದ ವಾರ್ಷಿಕ ₹ 2 ಲಕ್ಷ ಹಣ ಉಳಿತಾಯವಾಗುತ್ತದೆ. ಅವರ ಹಸಿವು ನೀಗುತ್ತದೆ. ಆರ್ಥಿಕ ಮಟ್ಟ ಕೂಡ ಸುಧಾರಿಸಬಹುದು.ರಿಶೈನ್‌ ಸಂಸ್ಥೆ ಪ್ರಮುಖವಾಗಿ ನಗರದ ಬ್ರಿಮ್ಸ್‌ ಕೇಂದ್ರವಾಗಿಟ್ಟುಕೊಂಡು ಹೆಚ್ಚು ಆಹಾರ ಪೂರೈಸುತ್ತಿದೆ.

ಬ್ರಿಮ್ಸ್‌ನಲ್ಲಿ ಇದುವರೆಗೆ 1100 ದಿನ ಆಹಾರ ಪೂರೈಸಿದ್ದೇವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ತಲಾ 300 ಜನರಿಗೆ ಆಹಾರ ಕೊಟ್ಟಿದ್ದೇವೆ. ಎರಡೊತ್ತಿನ ಆಹಾರಕ್ಕೆ ಕನಿಷ್ಠ ₹ 100 ವೆಚ್ಚ ಅಂದಾಜು ಮಾಡಿದರೆ ಇದುವರೆಗೆ ₹6.60 ಕೋಟಿ ಮೌಲ್ಯದ ಆಹಾರ ಪೂರೈಸಿದಂತಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments