ಬೀದರ್ : ಬೀದರ್ ಜಿಲ್ಲೆಯಲ್ಲಿ ಕಮಲನಗರ ತಾಲೂಕು ನಿರ್ಮಾಣವಾಗಿ ಏಳು ವರ್ಷ ಕಳೆದರೂ, ಕಮಲನಗರ ತಾಲುಕಿನಲ್ಲಿ ತಾಲೂಕು ಮಟ್ಟದ ಬಹುತೇಕ ಕಚೇರಿಗಳು ಇಲ್ಲಾ ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ತಹಶೀಲ್ದಾರ ಕಚೇರಿ ಎದುರು ಕರವೇ ಕಾರ್ಯಕರ್ತರು ಧರಣಿ ಕುಳಿತು ಆಕ್ರೋಶ ಹೊರಹಾಕಿದರು.
ನೂತನ ತಾಲೂಕು ನಿರ್ಮಾಣವಾದ ಬಳಿಕ ತಾಲೂಕು ಮಟ್ಟದಲ್ಲಿ ತಾಲೂಕಿಗೆ ಬೇಕಾಗುವ ಎಲ್ಲ ಕಚೇರಿಗಳು ನಿರ್ಮಾಣವಾಗಬೇಕಿತ್ತು. ಆದ್ರೆ ತಾಲೂಕಿನಲ್ಲಿ ತಹಶೀಲ್ದಾರ ಕಚೇರಿ, ತಾಲೂಕು ಪಂಚಾಯತ ಕಚೇರಿಗಳು ಮಾತ್ರ ಇವೆ. ಇನ್ನುಳಿದ ಯಾವ ಕಚೇರಿಗಳನ್ನ ನಿರ್ಮಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಮುಂದಾಗದೆ ಇರೋದು ವಿಪರ್ಯಾಸ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ್ರು. ಈ ವೇಳೆ ಮಾತನಾಡಿದ ಕರವೇ ಜಿಲ್ಲಾದ್ಯಕ್ಷ ಸೋಮನಾಥ್ ಮುಧೋಳ, ನೂತನವಾಗಿ ಕಮಲನರ ತಾಲೂಕು ನಿರ್ಮಣವಾದ ಬಳಿಕ ಬಹುತೇಕ ಕಚೇರಿಗಳು ನಿರ್ಮಾಣವಾಗದೇ ಇರೋದು ವಿಪರ್ಯಾಸ. ತಾಲೂಕಿನಲ್ಲಿ ತಾಲೂಕಾಸ್ಪತ್ರೆ, ಎಪಿಎಮ್‌ಸಿ, ತೋಟಗಾರಿಕಾ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ಕಚೇರಿ ಸೇರಿದಂತೆ ಹಲವು ಕಚೇರಿಗಳು ನಿರ್ಮಾಣವಾಗಿಲ್ಲಾ. ತಾಲೂಕಿನ ಜನರು, ಕೋರ್ಟ್‌ಗೆ ತೆರಳಬೇಕಾದ್ರೆ ಬೀದರ್ ಅಥವಾ ಬಾಲ್ಕಿಗೆ ತೆರಳಬೇಕು. ಇದರಿಂದ ತಾಲುಕಿನ ಜನರಿಗೆ ತೊಂದ್ರೆ ಆಗ್ತಾ ಇದ್ದು ಕೂಡಲೇ ಕಮಲನಗರ ತಾಲೂಕಿನಲ್ಲಿ ಅಗತ್ಯವಾಗಿ ಬೇಕಾದ ಕಚೇರಿಗಳನ್ನ ನಿರ್ಮಿಸುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ರು….