
ಭಗವಂತ ಖೂಬಾಗೆ ಟಿಕೆಟ್ ಘೋಷಣೆ ಹಿನ್ನಲೆ ಶಾಕ್ ಗೆ ಒಳಗಾದ್ರಾ ಮಾಜಿ ಸಚಿವ ಪ್ರಭು ಚವ್ಹಾಣ್ ಎಂಬ ಪ್ರಶ್ನೆ ಎದುರಾಗಿದೆ. ಎದೆಬಡಿತ ಹೆಚ್ಚಾಗಿ ಚೌವ್ಹಾಣ್ ಆರೋಗ್ಯದಲ್ಲಿ ಏರುಪೇರು ಕಾಣಿಸಿದೆ. ಮುಂಬೈ ಪ್ರವಾಸದಲ್ಲಿದ್ದ ಪ್ರಭುಚವ್ಹಾಣ್ ಗೆ ಆರೋಗ್ಯದಲ್ಲಿ ಏರುಪೇರಾಗಿ ಮುಂಬೈನ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಆರೋಗ್ಯದಲ್ಲಿ ಸ್ಥಿರತೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಭಗವಂತ ಖೂಬಾಗೆ ಟಿಕೆಟ್ ನೀಡದಂತೆ ಭಾರೀ ಹೋರಾಟ ನಡೆಸಿದ್ಧ ಚವ್ಹಾಣ್, ತನ್ನನ್ನು ಸೋಲಿಸಲು ಯತ್ನಿಸಿದ್ದ ಖೂಬಾ ಎಂದು ಸಾರ್ವಜನಿಕವಾಗಿ ಗಳಗಳ ಅತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲಿಗೆ ಸಾರ್ವಜನಿಕ ವೇದಿಕೆಯಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿದ್ದರು ಚವ್ಹಾಣ್. ಯಾವ ಹೋರಾಟವು ಫಲ ನೀಡದ್ದರಿಂದ ಮಾನಸಿಕ ಆಘಾತಕ್ಕೆ ಒಳಗಾದರಾ ಪ್ರಭು ಚವ್ಹಾಣ್ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗುತ್ತಿದೆ.




