ಬೆಳಗಾವಿ : ರಾಜ್ಯದಲ್ಲಿ ಬೇಸಿಗೆಯಿಂದಾಗಿ ಗದ್ದೆ ನೀರಿಗೂ ತಾತ್ವಾರ, ಜಮೀನಿಗೆ ನೀರು ಬಿಡುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಾದಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ಅರಭಾವಿ ಹಾಗೂ ಆಕೆಯ ಪತ್ನಿ ಮಂಜುಳಾ ಅರಭಾವಿ ಮೇಲೆ ಹಲ್ಲೆ ಮಾಡಿದ್ದಾರೆ. ಅದೇ ಗ್ರಾಮದ ಹುಕ್ಕೇರಿ ಕುಟುಂಬದಿಂದ ಅರಭಾವಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ. ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಜಗಳವಾಡಿದ್ದ ನಾಗಪ್ಪ ಮತ್ತು ವಿಠ್ಠಲ್ ಹುಕ್ಕೇರಿ, ನಾಗಪ್ಪ ಅರಭಾವಿ ಮೇಲೆ ಹಲ್ಲೆ ಮಾಡಿದ ನಂತರ ಆಕೆಯ ಪತ್ನಿಯ ಮೇಲೂ ಹಲ್ಲೆ, ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಾಗಪ್ಪಾನ ಪತ್ನಿ ಮಂಜುಳಾ ಮೇಲೆ ಹಲ್ಲೆ ಮಾಡಿದ ಹುಕ್ಕೇರಿ ಕುಟುಂಬದ ಸದಸ್ಯರು, ಹಾಲಪ್ಪ ಹುಕ್ಕೇರಿ, ಯಲ್ಲಪ್ಪ ಹುಕ್ಕೇರಿ, ಕುಮಾರ್ ಹುಕ್ಕೇರಿ, ಲಕ್ಷ್ಮೀ ಹುಕ್ಕೇರಿ, ಸೇರಿ 7 ಜನರ ಮೇಲೆ ಆರೋಪ ಮಾಡಿದ್ದಾರೆ. ಹಲ್ಲೆಗೊಳಗಾದ ಮಂಜುಳಾ ಅರಭಾವಿಯಿಂದ ಹುಕ್ಕೇರಿ ಕುಟುಂಬದಸ್ಥರ ಮೇಲೆ ಆರೋಪ ಮಾಡಿದ್ದಾರೆ. ಮಂಜುಳಾ ಮೇಲೆ ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಯಾಗಿದೆ ಎಂದು ರಾಯಭಾಗ ಪೊಲೀಸರಿಗೆ ದೂರು ನೀಡಲು ಹೋಗಿದ್ದ ಮಂಜುಳಾರನ್ನು ಗದರಿಸಿ ಕಳಿಸಿದ ಆರೋಪ ಕೇಳಿ ಬಂದಿದೆ. ರಾಯಭಾಗ ಪೊಲೀಸರು ದೂರು ಸ್ವೀಕರಿಸದ ಹಿನ್ನೆಲೆ ಎಸ್ಪಿಗೆ ದೂರು ನೀಡಲು ಮಂಜುಳಾ ಅರಭಾವಿ ಮುಂದಾಗಿದ್ದಾರೆ.