Wednesday, April 30, 2025
34.5 C
Bengaluru
LIVE
ಮನೆರಾಜ್ಯಕ್ಷೀರಭಾಗ್ಯ ಹಾಲಿಗೆ ಬಿದ್ದ ಹಲ್ಲಿ; ಅಸ್ವಸ್ಥ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕ್ಷೀರಭಾಗ್ಯ ಹಾಲಿಗೆ ಬಿದ್ದ ಹಲ್ಲಿ; ಅಸ್ವಸ್ಥ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಬೆಳಗಾವಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಕ್ಷೀರಭಾಗ್ಯದ ಹಾಲಿನಲ್ಲಿ ಹಲ್ಲಿ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಹೌದು, ಸರಕಾರಿ ಶಾಲೆಗೆ ಮಕ್ಕಳಿಗೆ ತರಲಾದ ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ ಶಾಲಾ ಬಾಲಕರು ಅಸ್ವಸ್ಥರಾದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉ. ಖಾನಾಪುರ ಗ್ರಾಮದಲ್ಲಿ ನಡೆದಿದ್ದು, ಇದೇ ಹಾಲನ್ನ ಸೇವಿಸಿದ 23 ಶಾಲಾ ಬಾಲಕರು ಅಸ್ವಸ್ಥರಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಪರಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯ ಹಾಲು ನೀಡಲಾಗಿತ್ತು. ಆದರೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ವಿಷಯವು ಮಕ್ಕಳು ಹಾಲು ಬಹಿರಂಗವಾಗಿತ್ತು.ಬಳಿಕ ಎರಡು ಅಂಬ್ಯುಲನ್ಸ್ ಹಾಗೂ ಕೆಲವು ಖಾಸಗಿ ವಾಹನಗಳ ಮೂಲಕ ಸಂಕೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಲ್ವರು ಮಕ್ಕಳನ್ನು ಹುಕ್ಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಸುದ್ದಿ ತಿಳಿದ ಬಳಿಕ ಮಕ್ಕಳ ಪಾಲಕರು ಗಾಬರಿಗೊಂಡು ಸಂಕೇಶ್ವರ ಸರಕಾರಿ ಆಸ್ಪತ್ರೆಗೆ ಧಾವಿಸಿ ಮಕ್ಕಳ ಮುಖ ನೋಡಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments