ಬೆಳಗಾವಿ : ಎಲೆಕ್ಟ್ರಿಕ್ ಓಕೆನವಾ(okinawa) ಕಂಪನಿಯ ಬೈಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದಲ್ಲಿ ರಾತ್ರಿ ನಡೆದಿದೆ.

ಗೋಟುರ ಗ್ರಾಮದ ರೈತ ಶಂಕರಗೌಡ ಪಾಟೀಲ ಅವರಿಗೆ ಸೇರಿದ ಎಲೆಕ್ಟ್ರಿಕಲ್ ಬೈಕ್ ಇದಾಗಿದ್ದು, ಮನೆಯ ಮುಂದೆ ನಿಲ್ಲಿಸಲಾಗಿದ್ದ ವೇಳೆ ರಾತ್ರಿ ಅವಗಡ ನಡೆದಿದೆ.ಬೆಂಕಿಯ ಅರಬ್ಬರಕ್ಕೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು,ಸುತ್ತಲಿನ ಜನರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಸುಮಾರು ತೊಂಬತ್ತು ಸಾವಿರ ರೂಪಾಯಿ ಬೈಕ್ ಬೆಂಕಿಗಾಹುತ್ತಿಯಾಗಿದೆ.ಎಲೆಕ್ಟ್ರಿಕ್ ಬೈಕ್ ಬೆಂಕಿಗಾಹುತಿಯಿಂದ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.


