ಚಿಕ್ಕೋಡಿ : ಸರಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ಚುಚ್ಚುಮದ್ದು ತಜ್ಞರಿಲ್ಲದೇ ಬಾಣಂತಿಯರ ಪರದಾಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಎರಡ್ಮೂರು ದಿನಗಳಿಂದ ಅರವಳಿಕೆ ತಜ್ಞರಿಲ್ಲದೇ ಬಾಣಂತಿಯರ ನೋವಿನಿಂದ ಪರದಾಡುತ್ತಿದ್ದು, ಚಿಕ್ಕೋಡಿ ಅಕ್ಕ ಪಕ್ಕದ ಬಾಣಂತಿಯರು ತಜ್ಞರಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ.
ಸಿಬ್ಬಂದಿಗಳ ಕೊರತೆಯಿಂದ ಉಂಟಾಗುತ್ತಿರುವ ಅನಾನುಕೂಲ, ಅರವಳಿಕೆ ತಜ್ಞನಿದ್ದರೂ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಹೆಸರಿಗಷ್ಟೇ ಇರುವ ತಾಯಿ-ಮಕ್ಕಳ ಆಸ್ಪತ್ರೆ,ಶೋಚನೀಯ ಸ್ಥಿತಿಯಲ್ಲಿ ಬಾಣಂತಿಯರ ಪರಿಸ್ಥಿತಿ. ಆಸ್ಪತ್ರೆಯಲ್ಲಿದ್ರೂ ಅರವಳಿಕೆ ಚುಚ್ಚುಮದ್ದು ನೀಡದ ವೈದ್ಯನ ವಿರುದ್ಧ ರೋಗಿಗಳ ಸಂಬಂಧಿಕರಿಂದ ತರಾಟೆ ತೆಗೆದುಕೊಂಡಿದ್ದಾರೆ.
ಇನ್ನೊಂದೆಡೆ ನಾನು ಅರವಳಿಕೆ ಚುಚ್ಚುಮದ್ದು ನೀಡಲು ಆಗಲ್ಲ ಎನ್ನುತ್ತಿರುವ ವೈದ್ಯ ಅಭಿಜಿತ, ಡಾ ಅಭೀಜಿತ್ಗೆ ಅಮಾನತ್ತು ಮಾಡುವಂತೆ ಮುಖ್ಯ ವೈದ್ಯಾಧಿಕಾರಿಗೆ ಸಂಬಂಧಿಕರು ತರಾಟೆ ತೆಗೆದುಕೊಂಡಿದ್ದಾರೆ.