ಬೆಳಗಾವಿ : ಗಂಭೀರವಾಗಿ ಗಾಯಗೊಂಡರು ಕಳೆದ ಎರಡು ದಿನಗಳಿಂದ ನರಳಾಡುತ್ತಿದ್ದ ಮಂಗನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ ಕೇರೂರ ಗ್ರಾಮದ ರೈತ ಮುಖಂಡ ಪರಗೌಡ ಪಾಟೀಲ್ ಮಂಗನನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕಾಲಿಗೆ ಗಾಯ ಮಾಡಿಕೊಂಡು ಮಂಗವೊಂದು ಗ್ರಾಮದ ತೋಟದ ವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದು ಬಳಿಕ ಅಲ್ಲೆ ಇದ್ದ ಬಾವಿಯೊಂದಕ್ಕೆ ನೀರು ಕುಡಿಯಲು ಇಳಿದಿದ್ದ ಮಂಗ ಗಾಯಗೊಂಡಿದ್ದ ಹಿನ್ನಲೆ ಮೆಲೆ ಬರಲು ಆಗದೆ ರೋದನೆ ಪಡುತ್ತಿತ್ತು ಇದನ್ನು ಗಮನಿಸಿದ ರೈತ ಮುಖಂಡ ಪರಗೌಡ ಕೂಡಲೆ ಮಂಗನನ್ನ ಹಿಡಿದು ಚಿಕ್ಕೋಡಿ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಅಲ್ಲದೆ ಚಿಕಿತ್ಸೆ ಪಡೆಯುತ್ತಿರುವ ಮಂಗನ ಆರೈಕೆಯನ್ನು ತಮ್ಮ ತೋಟದಲ್ಲಿ ಮಾಡುತ್ತಿದ್ದಾರೆ. ಮಂಗನ ಕಷ್ಟ ಕಂಡು ಮಂಗನ ಸಮಸ್ಯೆಗೆ ಸ್ಪಂದಿಸಿದ ಪರಗೌಡ ಪಾಟೀಲ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ..