ಬೆಂಗಳೂರು: ಬಿಡಿಎ ಅಂದ್ರೆ ಬೋಗಸ್,ಬಂಡಲ್ ಅಂತ ಜನ ಉಗಿಯುತ್ತಿದ್ದಾರೆ. ಅದ್ರೂ ಅಧಿಕಾರಿಗಳ ಆಟ,ಅವ್ರು ಬಿಲ್ಡಪ್ ಮಾತ್ರ ಕಡಿಮಿಯಾಗ್ತಿಲ್ಲ. ಬೆಂಗಳೂರಲ್ಲಿ ಇರೋ ಬರೋ.. ಲೇಔಟ್‌ಗಳನ್ನ ನೆಟ್ಟಿಗೆ ನಿರ್ಮಾಣ ಮಾಡೋಕೆ ಆಗ್ತಿಲ್ಲ. ಇಂತದ್ರಲ್ಲಿ ಶಿವರಾಮ ಕಾರಂತ ಬಡಾವಣೆಯನ್ನ ಲೇಔಟ್ ಮಾಡ್ತೀವಿ ಅಂತ ಹೊರಟಿದೆ.
ಈಗಾಗಲೇ ಶಿವರಾಮ ಕಾರಂತ ಬಡಾವಣೆಯನ್ನ ನಿರ್ಮಾಣ ಮಾಡೋಕೆ ಒದ್ದಾಡ್ತಿರೋ ಬಿಡಿಎ ಭೂ ದಾಹ ಕಮ್ಮಿಯಾದಂತೆ ಕಾಣ್ತಿಲ್ಲ.. ಯಾಕೆಂದರೆ ಮತ್ತೆ ಭೂಸ್ವಾಧೀನ ಪಡಿಸಿಕೊಳ್ಳಕ್ಕೆ ಮುಂದಾಗಿದೆ.. ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಮಾಡಲು ಪ್ಲಾನ್ ಮಾಡಿದೆ.. ಈ ಲೇಔಟ್‌ಗೆ ಅಂತ ಸುಮಾರು 2ಸಾವಿರ ಎಕರೆ ಭೂ ಸ್ವಾದೀನಪಡಿಸಿಕೊಳ್ಳಲು ಮುಂದಾಗಿದೆ.. ಈ ಬಗ್ಗೆ ಬಿಡಿಎ ಬೋರ್ಡ್ ಮೀಟಿಂಗ್‌ನಲ್ಲಿ ತೀರ್ಮಾನ ಮಾಡಲಾಗಿದ್ದು,ಇದಕ್ಕೆ ಅಂತ ಬ್ಲೂ ಪ್ರಿಂಟ್ ರೆಡಿ ಮಾಡಲಾಗಿದೆ. ಈಗಾಗಲೇ 12 ಗ್ರಾಮಗಳಲ್ಲಿ ಖಾತೆದಾರರ ವಿವರ ಜಾಗ ವಿಸ್ತೀರ್ಣ, ಜಮೀನು ನಕ್ಷೆ ಚಕ್ಕಬಂದಿಯನ್ನ ಬಿಡಿಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.ಈ ಬಗ್ಗೆ ಕೆಲವೇ ದಿನಗಳಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಮುಂದಾಗಿದ್ದಾರೆ.ಯಲಹಂಕ ಸುತ್ತಮುತ್ತಲಿನ ಲಿಂಗರಾಜಸಾಗರ,ಸೋಲದೇವನಹಳ್ಳಿ,ಕೆಂಪಾಪುರ,ಕಸಘಟ್ಟಪುರ,ಆವಲಹಳ್ಳಿ,ಸೇರಿ ಹಲವು ಹಳ್ಳಿಗಳಲ್ಲಿ ರೈತರ ಭೂಮಿ ವಶಪಡಿಸಿಕೊಂಡು ಲೇಔಟ್ ಮಾಡಲು ಬಿಡಿಎ ಸಿದ್ದತೆ ಮಾಡಿಕೊಳ್ತಿದೆ..
ಈಗಾಗಲೇ ಶಿವಕಾರಂತ ಬಡಾವಣೆ ಅಂತ 3567 ಎಕರೆ ಅಂತಿಮ ಅಧಿಸೂಚನೆ ಹೊರಡಿಸಿದೆ.ಸುಪ್ರೀಂ ಕೋರ್ಟ್ ಕೂಡಲೇ ಶಿವಕಾರಂತ ಬಡಾವಣೆ ನಿರ್ಮಿಸಿ ಅಂತ ಹೇಳಿದ್ರೂ ಲೇಔಟ್ ನಿರ್ಮಾಣ ಮಾಡೋಕೆ ಆಗ್ತಿಲ್ಲ.ಆದ್ರೂ ಇದೀಗ ಮತ್ತೆ ಶಿವರಾಮ ಕಾರಂತ ಬಡಾವಣೆ ಪಾರ್ಟ್ 2 ಅಂತ ಮಾಡೋಕೆ ಹೊರಟಿದೆ..ಈ ಬಡಾವಣೆಗೆ ಯಲಹಂಕ ಬಳಿಯ 12 ಗ್ರಾಮಗಳನ್ನ ಗುರುತಿಸಿ ಸರ್ವೇ ಕೂಡ ಮಾಡಲಾಗಿದೆ..
ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿ, ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಶುರು ಆಗಲಿದೆ. ಆದ್ರೆ ಇತ್ತ ಸರ್ಕಾರ ಇದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋ ಕುತೂಹಲ ಮೂಡಿದೆ..ಆದ್ರೆ ಇತ್ತ ಜನ ಬಿಡಿಎ ಸಹವಾಸ ಬೇಡ ಅಂತ ಹೇಳ್ತಿದ್ದಾರೆ..ಸದ್ಯ ಬಿಡಿಎ ಅಧಿಕಾರಿಗಳು ಇರೋದನ್ನ ನೆಟ್ಟಿಗೆ ಮಾಡ್ತಿಲ್ಲ.ಇದೀಗ ಮತ್ತೊಂದು ಲೇಔಟ್ ಬೇಕಾ ಎನ್ನುತ್ತಿದ್ದಾರೆ ಸ್ಥಳೀಯ ಜನ..ಆದ್ರೆ ಬಿಡಿಎ ಹೊಸ ಲೇಔಟ್ ಅಭಿವೃದ್ಧಿಗೂ ಭ್ರಷ್ಟಾಚಾರಕ್ಕೂ ಅನ್ನೋ ಪ್ರಶ್ನೆಗಳು ಶುರುವಾಗಿವೆ..