ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಈ ಹಿನ್ನೆಲೆ ಇದೀಗ ಟ್ವೀಟರ್ ಪೋಸ್ಟ್ ಒಂದು ಸಖತ್ ಸದ್ದು ಮಾಡ್ತಾ ಇದೆ. ಮದುವೆಗೆ ಹೆಣ್ಣು ಕೊಡ್ತಿಲ್ಲ ಅಂತ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಟ್ವಿಟ್ ಮಾಡಿದ್ದಾರೆ. ಟ್ವೀಟ್ ನ್ನು ರಾಹುಲ್ ಗಾಂಧಿ ಯವರಿಗೆ ಟ್ಯಾಗ್ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕುಡಿಯೋದಿಕ್ಕೆ ನೀರಿಲ್ಲ..ಹೀಗಾಗಿ ವರನಿಗೆ ವಧು ಸಿಕ್ತಿಲ್ಲ.. ಐಟಿ ಉದ್ಯೋಗಿಯಾಗಿದ್ರು ಕರಿಮಣಿ ಮಾಲೀಕನಾಗುವ ಭಾಗ್ಯವಿಲ್ಲ. ಈ ಸಮಸ್ಯೆಯನ್ನ ಪರಿಹರಿಸಿ ಕೊಡಿ ಅಂತ x ನಲ್ಲಿ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿರುವ ಸಾಫ್ಟ್ ವೇರ್ ಉದ್ಯೋಗಿ, ನೀರಿನ ಸಮಸ್ಯೆ ಮುಕ್ತಗೊಳಿಸಿ ಅಂತ ಆಗ್ರಹಿಸಿದ್ದಾರೆ. X ಮೂಲಕ ಮನವಿ ಮಾಡಿರೋ ಆತನ ಶಾದಿ ಭಾಗ್ಯದ ನೋವು ಹೊರಹಾಕಿದ್ದಾರೆ. ಜಲಕಂಟಕ ಎದುರಿಸುತ್ತಿರುವ ಬೆಂಗಳೂರಿನ ಉದ್ಯೋಗಿ ಬೇಡ ಅಂತ ಮದವೆಯಾಗೋದಿಕ್ಕೆ ಹೆಣ್ಣು ಮಕ್ಕಳು ಮುಂದೆ ಬರ್ತಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.
ಹೀಗಿದೆ ಟ್ವೀಟ್ ಸಾರಂಶ:
ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ಸಿಲಿಕಾನ್ ಸಿಟಿಯಲ್ಲಿ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನೊಬ್ಬ ತನ್ನ ಸದ್ಯದ ಪರಿಸ್ಥಿತಿಯ ಅನುಭವವನ್ನ ನನ್ನೊಂದಿಗೆ ಹಂಚಿಕೊಂಡಿದ್ದಾರೆ.. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು ವಧುವಿನ ಹುಡುಕಾಟದಲ್ಲಿದ್ದಾರೆ. ಎಷ್ಟೇ ಹುಡುಕಿದರೂ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಯಾವುದೇ ಹುಡುಗಿಯರು ಬೆಂಗಳೂರು ಉದ್ಯೋಗಿಯೊಂದಿಗೆ ಮದುವೆಯಾಗಲು ಸಿದ್ಧರಿಲ್ಲ
-ನರೇಂದ್ರ