ಬೆಂಗಳೂರು : ನಾಮಫಲಕ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯಗೊಳಸಿಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕನ್ನಡ ಕಡ್ಡಾಯಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕ್ತಿರೋ ಕನ್ನಡ ಪರ ಸಂಘಟನೆಗಳು, ನಾಮಫಲಕ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯ ಗೊಳಸಿಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕನ್ನಡ ನಾಮಫಲಕ ಶಾಸನಸಭೆಯಲ್ಲಿ ಮಸೂದೆ ಆಗಬೇಕೆಂದು ಒತ್ತಾಯಿಸಿದ್ರು. ಪ್ರತಿಭಟನೆಯಲ್ಲಿ ಸ.ರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ರು.
ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಕನ್ನಡಕ್ಕಾಗಿ ಹೋರಾಡುವಾಗ ಯಾರೂ ಕೂಡ ಇಲ್ಲ. ಕನ್ನಡ ನಾಮಫಲಕ ಕಡ್ಡಾಯ ಆಗ್ಬೇಕು. ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿಯವರು ಕೂಡ ಮಾತಾಡ್ತಿಲ್ಲ. ಈ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಬಿಜೆಪಿ, ಕಾಂಗ್ರೆಸ್ ಅವರದ್ದೇ ಪ್ರತಿಷ್ಠೆಗೆ ಪ್ರತಿಭಟನೆ ನಡೆಸ್ತಿದ್ದಾರೆ ಎಂದರು. ಆದ್ರೆ ಕನ್ನಡದ ಬಗ್ಗೆ ಹೋರಾಟ ಯಾರೂ ಮುಂದಾಗ್ತಿಲ್ಲ. ರಾಜ್ಯದ ಗತಿ ಏನಾಗ್ತಿದೆ.?ಇದೇ ರೀತಿ ಮುಂದುವರೆದ್ರೆ ಅಖಂಡ ಕರ್ನಾಟಕ ಬಂದ್ ಮಾಡ್ಬೇಕುತ್ತೆ ವಾಟಾಳ್ ನಾಗರಾಜ್ ಹೇಳಿದರು.


