ಬೆಂಗಳೂರು : ರಾಜ್ಯ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಹೊಸ ಐಷಾರಾಮಿ ಕಾರು ಬಂದಿದೆ. ಟೊಯೊಟಾ ಫಾರ್ಚೂನರ್ ಕಾರು ಇದಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ. 360 ಡಿಗ್ರಿ ಕ್ಯಾಮೆರಾ ಕಾರಿನಲ್ಲಿ ಅಳವಡಿಸಲಾಗಿದ್ದು, ವಿಶೇಷ ಎಲ್‌ಇಡಿ ಲೈಟ್ ಸೌಲಭ್ಯ ಕೂಡ ಇದರಲ್ಲಿ ಇದೆ. ಈ ಕಾರಿನ ಬೆಲೆ 41 ಲಕ್ಷ ರೂ. ಎಂದು ಹೇಳಲಾಗಿದ್ದು, ಸಚಿವಾಲಯದಿಂದ ಕಾರನ್ನು ನೀಡಲಾಗಿದೆ.ಇನ್ನು ಐಶಾರಾಮಿ ಕಾರು, 360 ಡಿಗ್ರಿ ಕ್ಯಾಮೆರಾ ಹಾಗೂ ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ.

ಕೆಲ ವಾರಗಳ ಹಿಂದಷ್ಟೇ ಸಚಿವರಿಗೆ ಹೊಸ ಕಾರು!
ಇನ್ನು, ಕೆಲ ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಚಿವರ ಪ್ರಯಾಣಕ್ಕಾಗಿ 33 ಹೊಸ ಇನ್ನೊವಾ ಕ್ರಸ್ಟಾ ಹೈ ಬ್ರೀಡ್ ಕಾರನ್ನು ಖರೀದಿಸಲಾಗಿತ್ತು. ಸುಮಾರು 9.9 ಕೋಟಿ ರೂ. ವೆಚ್ಚದಲ್ಲಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಿ ನೀಡಲಾಗಿತ್ತು. ಪ್ರತಿಯೊಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ತಲಾ ಸುಮಾರು 30 ಲಕ್ಷ ರೂ. ವೆಚ್ಚವಾಗಿತ್ತು ಎಂದು ತಿಳಿದುಬಂದಿತ್ತು.

ರಾಜ್ಯ ಸರ್ಕಾರದ ನಡೆಗೆ ಆಗ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇರುವ ಸಂದರ್ಭದಲ್ಲಿ ಸಚಿವರಿಗೆ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಈಗ ಸ್ಪೀಕರ್ ಯುಟಿ ಖಾದರ್ ಅವರಿಗೆ 40 ಲಕ್ಷ ರೂ. ಮೊತ್ತದ ಐಷಾರಾಮಿ ಕಾರನ್ನು ಸಚಿವಾಲಯ ನೀಡಿರುವ ಬಗ್ಗೆ ಜನ ಏನಂತಾರೆ ಎಂಬುದು ಕುತೂಹಲ.


