ಬೆಂಗಳೂರು : ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರವಾದ ಚುನಾವಭಾ ಪ್ರಚಾರ ಮತ್ತು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೇವನಹಳ್ಳಿ ಬಳಿ ಚಿತ್ರೀಕರಣದಲ್ಲಿ ಶಿವರಾಜ್ಕುಮಾರ್ ಭಾಗಿಯಾಗಿದ್ದರು. ಭಾನುವಾರ ಶೂಟಿಂಗ್ ಸಂದರ್ಭದಲ್ಲೇ ಸುಸ್ತು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ತೆರಳಿದ್ದರು. ಶೂಟಿಂಗ್ ಸೆಟ್ನಲ್ಲಿನ ದೂಳಿನ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದ್ದು, ಕೇವಲ ಜನರಲ್ ಚೆಕ್ಆಪ್ಗೆ ಆವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಮದು ಆಪ್ತರು ತಿಳಿಸಿದ್ದಾರೆ. ನಾಳೆ ಆಸ್ಪತ್ರೆಯಿಂದ ಮನೆ ತೆರಳಲಿದ್ದಾರೆ ಎನ್ನಲಾಗಿದೆ.