ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು..ಈ ಪ್ರಕರಣವನ್ನ ಬಿಜೆಪಿಯವರು ಎನ್ ಐ ಎಗೆ ವಹಿಸಿ ಅಂತ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ರು. ಇದಾದ ಬೆನ್ನಲ್ಲೇ ಇಂದು ಕೇಂದ್ರ ಗೃಹ ಸಚಿವಾಲಯ ಎನ್ ಐ ಎ ತನಿಖೆಗೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಎಫ್ ಐ ಆರ್ ದಾಖಲಿಸಿಕೊಂಡಿರುವ ಎನ್ ಐ ಎ ತನಿಖೆ ಚುರುಕುಗೊಳಿಸಲಿದೆ. ಬಾಂಬ್ ಸ್ಫೋಟ ಬಳಿಕ ಆರೋಪಿಯ ಮುಖ ಚಹರೆ ಪತ್ತೆಯಾಗಿದೆ. ಈ ಜಾಡು ಹಿಡಿದಿರುವ ಎನ್ ಐ ಎ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿ ಆರೋಪಿಯನ್ನ ಬಂಧಿಸುವ ಜವಾಬ್ದಾರಿ ವಹಿಸಿಕೊಂಡಿದೆ.
ಇನ್ನು ಕೃತ್ಯದಲ್ಲಿ ಮಂಗಳೂರು ಬ್ಲಾಸ್ಟ್ ರೀತಿಯೇ ಟೈಮರ್ ಬಳಕೆ ಮಾಡಿರೋದು, ನೆಟ್ಟು ಬೋಲ್ಟ್ ದೊರಕಿರೋದನ್ನ ನೋಡಿದ್ರೆ, ಇದು ಉಗ್ರ ಸಂಘಟನೆಯ ಕೈವಾಡವಿರಬಹುದು ಎಂಬ ಶಂಕೆಯಡಿ ಮಂಗಳೂರು, ಕೇರಳ, ತಮಿಳುನಾಡು, ಮಡಿಕೇರಿ ಮುಂತಾದ ಸ್ಥಳಗಳಲ್ಲಿ ತನಿಖಾ ತಂಡ ತನಿಖೆ ನಡೆಸಲಿದೆ