ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಶಂಕಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅನುಮಾನಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕೃತ್ಯ ನಡೆಸಿ ಬೆಂಗಳೂರು ಗಡಿ ದಾಟಿ ಹೋಗುವ ಮುನ್ನವೇ ಶಂಕಿತ ಜಾಡು ಹಿಡಿದು ವಶಕ್ಕೆ ಪಡೆದು ನಿಗೂಢ ಸ್ಥಳದಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ಕೃತ್ಯ ನಡೆದ ಸ್ಥಳ ಮತ್ತು ಸುತ್ತಮುತ್ತಲ ಸುಮಾರು ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಬಳಸಿಯೇ ಬ್ಲಾಸ್ಟ್ ಮಾಡಿರೋದು ಕನ್ಫರ್ಮ್ ಆಗಿದೆ. ಇದೀಗ ಸಿಸಿಬಿ ವಿಚಾರಣೆಗೆ ಒಳಪಡಿಸಿರೋ ವ್ಯಕ್ತಿಯೇ ಬಾಂಬ್ ಇಟ್ಟ ಆರೋಪಿಯಾ ಎಂದು ಸಿಸಿಬಿ ಟೀಮ್ ವಿಚಾರಣೆ ಚುರುಕುಗೊಳಿಸಿದೆ. ಚರ್ಚ್ ಸ್ಟ್ರೀಟ್ ಬ್ಲಾಸ್ಟ್ ಬಳಿಕ ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ಇದಾಗಿದ್ದು, ಸಿಲಿಕಾನ್ ಸಿಟಿ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.