ಅಗತ್ಯ ಸಂಖ್ಯಾ ಬಲ ಇಲ್ಲದಿದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಕುಪೇಂದ್ರರೆಡ್ಡಿಯವರನ್ನ ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದಾರೆ. ಆದರೆ ಫಲಿತಾಂಶಕ್ಕೂ ಮುನ್ನವೇ ದಳಪತಿಗಳು, ಸೋಲು ಒಪ್ಪಿಕೊಂಡಿದ್ದಾರೆ.
ಮತದಾನ ಮಾಡಿದ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ನಾವು ಗೆಲ್ಲುವುದಕ್ಕಿಂತ ಜೆಡಿಎಸ್ ಶಾಸಕರ ಒಗ್ಗಟ್ಟು ಪ್ರದರ್ಶನ ಮಾಡುವುದಕ್ಕಾಗಿ ಕುಪೇಂದ್ರ ರೆಡ್ಡಿಯನ್ನ ಕಣಕ್ಕೆ ಇಳಿಸಿದ್ದೇವೆ ಎಂದಿದ್ದಾರೆ. ನಮ್ಮ ಶಾಸಕರನ್ನು ಒಡೆಯಲು, ಕಾಂಗ್ರೆಸ್ ನವರು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಲು ಸ್ಪರ್ಧೆ ಮಾಡಿರೋದಾಗಿ ಎಂದಿದ್ದಾರೆ. ನಮ್ಮ ಪಕ್ಷದ ಎಲ್ಲಾ 19 ಶಾಸಕರು, ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಸಾರುವುದೇ ನಮ್ಮ ಉದ್ದೇಶವಾಗಿತ್ತು.
ಕಾಂಗ್ರೆಸ್ ನಾಯಕರು ಹೇಳುವಂತೆ, ನಾವು ಯಾವುದೇ ಶಾಸಕರಿಗೆ ಆಮಿಷ ಒಡ್ಡಿಲ್ಲ. ಆಮಿಷ ಹಾಗೂ ಧಮ್ಕಿ ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಸರ್ಕಾರ ರಚೆನೆಯಾದಾಗಿನಿಂದ 12 ರಿಂದ 13 ಶಾಸಕರು ಕಾಂಗ್ರೆಸ್ಗೆ ಬರಲು ಸಿದ್ದ ಎಂದು ಅವರೇ ಹೇಳುತ್ತಿದ್ದಾರೆ. ನಮ್ಮ ಶಾಸಕರ ನಿಷ್ಠೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ನಮ್ಮ ಶಾಸಕರ ನಿಷ್ಠೆ ಮತ್ತು ಬದ್ಧತೆ ಸಾಬೀತು ಪಡಿಸಲು ಕುಪೇಂದ್ರ ರೆಡ್ಡಿಯವರನ್ನ ಕಣಕ್ಕೆ ಇಳಿಸಿದ್ದೇವೆ ಎಂತು ಹೆಚ್ ಡಿಕೆ ತಿಳಿಸಿದ್ದಾರೆ.