ಲೋಕಾ ಸಭಾ ಚುನಾವಣೆ ಹಿನ್ನಲೆ ಬೆಂಗಳೂರಿನಲ್ಲಿ ಇಂದು ಮುಂಜಾನೆ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸ್ರು ದಾಳಿ ನಡೆಸಿದ್ದಾರೆ.. ಬೆಂಗಳೂರಿನ ದಕ್ಷಿಣ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ.
ಮುಂಬರಲಿರುವ ಲೋಕಸಭೆ ಚುನಾವಣೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರೌಡಿ ಚಟುವಟಿಕೆ ,ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಜಯನಗರ, ಬನಶಂಕರಿ , ಚನ್ನಮ್ಮನಕೆರೆ ಅಚ್ಚು ಕಟ್ಟು ಠಾಣೆ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ಕೈಗೊಂಡು ಸುಮಾರು 230 ರೌಡಿಗಳ ಮನೆ ಕಛೇರಿಗಳನ್ನು ಪರಿಶೀಲನೆ ನಡೆಸಲಾಗಿದೆ.
ಇಂದು ಬೆಳಗ್ಗೆ 5 ಗಂಟೆಯಿಂದ 8 ಗಂಟೆವರೆಗೂ ಪೊಲೀಸರಿಂದ ತಪಾಸಣೆ ನಡೆದಿದ್ದು ಮನೆಯಲ್ಲಿ ಕೆಲವು ದಾಖಲೆಗಳು , ಮಾರಾಕಾಸ್ತ್ರಗಳು ಆಯುಧಗಳು ಪತ್ತೆಯಾಗಿವೆ. ಸದ್ಯ ರೌಡಿಗಳ ಕೆಲಸ ಪೂರ್ವಾಪರ ,ವಿಳಾಸ , ಪೋನ್ ನಂಬರ್ , ಸಂಪೂರ್ಣ ವಿವರ ಪರಿಶೀಲನೆ ಮಾಡಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಸಾಧ್ಯತೆ ಹಾಗೂ ಇಂತಹ ಪಕ್ಷದ ಅಭ್ಯರ್ಥಿಗೆ ವೋಟ್ ಹಾಕುವಂತೆ ಬೆದರಿಕೆ ಹಾಕುವ ಸಾಧ್ಯತೆ ಹಿನ್ನೆಲೆ ಈ ದಾಳಿ ನಡೆದಿದೆ.