ಬೆಂಗಳೂರು : ನಿರ್ವಾನ ಸ್ಪಾ ಮೇಲೆ ಏಕಾಏಕಿ ಸಿಸಿಬಿ ಪೊಲೀಸ್ರು ಮೊನ್ನೆ ರೇಡು ಬಿದ್ದಿದ್ರು.. ಖುದ್ದು ಪೊಲೀಸ್ ಆಯುಕ್ತರೇ ನಿರ್ವಾನ ಸ್ಪಾ ಮೇಲೆ ಕಣ್ಣು ಇಡೋಕೆ ಸೂಚಿಸಿದ್ರು. ಆದ್ರಂತೆ ಕಳೆದ ಒಂದು ತಿಂಗಳಿನಿಂದ ಮಫ್ತಿಯಲ್ಲಿ ಪೊಲೀಸ್ರು ರೌಂಡ್ಸ್ ಶುರು ಮಾಡಿದ್ರು..ಪಕ್ಕಾ ಇನ್ಫರ್ಮೆಶನ್ ಇಟ್ಕೊಂಡು ರೇಡು ಬಿದ್ದ ಪೊಲೀಸ್ರಿಗೆ ಸ್ಪಾ ಹೆಸ್ರಲ್ಲಿ ನಡೆಯುತ್ತಿದ್ದ ಮಂಚದಾಟದ ಅನಾವರಣವಾಗಿತ್ತು.. ಇದು ಅಂತಿಂಥ ಅಡ್ಡೆಯಲ್ಲ.. ಸೋಶಿಯಲ್ ಮೀಡಿಯಾದಲ್ಲೇ ಪಾಪೂಲ್ಯಾರಿಟಿ ಪಡೆದಿದ್ದ ನಿರ್ವಾನ ಸ್ಪಾ ದಲ್ಲಿ ಬ್ಯಾಂಕಾಂಕ್ ಮಾದರಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತ ಗೊತ್ತಾಗಿತ್ತು..
ಸಿಸಿಬಿ ಎಸಿಪಿ ಧರ್ಮೆಂದ್ರ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ನಿದ್ದೆ ಬಿಟ್ಟಿದ್ರು.. ಹಗಲು ರಾತ್ರಿ ಎನ್ನದೇ ಸಿಸಿಬಿಯ ಮಹಿಳಾ ಸಂರಕ್ಷಣಾ ವಿಂಗ್ ತಿಂಗಳ ಕಾಲ ಅಡ್ಡೆ ಮೇಲೆ ಎಚ್ಚರದ ಕಣ್ಣು ನೆಟ್ಟಿತ್ತು.. ಮಫ್ತಿಯಲ್ಲಿ ಎಂಟ್ರಿ ಕೊಡುತ್ತಿದ್ದ ಸಿಸಿಬಿ ಪೊಲೀಸ್ರು ಗಿರಾಕಿಗಳಂತೆಯೂ ಒಳಹೊಕ್ಕು ಮಾಹಿತಿ ಕಲೆ ಹಾಕಿದ್ರು.. ಮೊದಲನೆ ಮತ್ತು ಆರನೇ ಮಹಡಿಯಲ್ಲಿರುವ ಸ್ಪಾ ನೊಳಗೆ ಏನೇನು ಆಗುತ್ತಿದೆ ಅನ್ನೋ ಮಾಹಿತಿ ಕಲೆ ಹಾಕಿದ ಬಳಿಕವೇ ರೇಡಿಗೆ ದಿನಾಂಕ ನಿಗದಿ ಮಾಡಿದ್ರು.. ಅದ್ರಂತೆ ರೇಡು ಬಿದ್ದು, ಅಡ್ಡೆಯ ಮಾಲೀಕ ಅನಿಲ್ ನನ್ನ ಬಂಧಿಸಿ 40 ಕ್ಕೂ ಹೆಚ್ಚು ಹುಡುಗಿಯರನ್ನ ರಕ್ಷಿಸಿದ್ರು..30ಕ್ಕೂ ಹೆಚ್ಚು ಗಿರಾಕಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು..
ಇನ್ನು ಆ ಸುಂದರಿ ಹೆಸ್ರು ಆರತಿ ದಯಾಳ್.. ಮೂಲತಃ ಮಧ್ಯಪ್ರದೇಶದ ಹೆಣ್ಣು ಮಗಳು.. ಬಡವರ ಮನೆಯಲ್ಲಿ ಹುಟ್ಟಿದ್ರು..ರೂಪದಲ್ಲಿ ಶ್ರಿಮಂತೆ…ರೂಪವನ್ನೆ ಬಂಡವಾಳ ಮಾಡ್ಕೊಂಡು ಫೀಲ್ಡಿಗಿಳಿದ ಆಕೆ ಹನಿ ಟ್ರ್ಯಾಪ್ ಹೆಸರಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು, ಅಧಿಕಾರಿಗಳನ್ನ ಸುಲಿಗೆ ಮಾಡಿದ್ಲು..2019ರಲ್ಲಿ ಅವನೊಬ್ಬ ಎಂಜಿನಿಯರ್ ಧೈರ್ಯ ಮಾಡಿ ದೂರು ಕೊಟ್ಟ ಕಾರಣ ಎಸ್ ಐಟಿ ತಂಡದಿಂದ ಬಂಧನಕ್ಕೆ ಒಳಗಾಗಿದ್ಲು.. ಈಗ್ಗೆ ನಾಲ್ಕು ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದವಳು ಸ್ಪಾ ಅಡ್ಡೆಯಲ್ಲಿ ಠಳಾಯಿಸಿದ್ಲು..
ಅನಿಲ್ ಹಾಗೂ ಆರತಿ ನಡುವೆ ವ್ಯವಹಾರದಲ್ಲಿ ಅದೆಂಥಹ ಬಿರುಕು ಬಂತೋ ಏನೋ ಗೊತ್ತಿಲ್ಲ..ಇವಳ ವಿರುದ್ಧವೇ ಕಳ್ಳತನ ಪ್ರಕರಣ ರಿಜಿಸ್ಟರ್ ಆಯ್ತು.. ಆರತಿ ದಯಾಳ್ ಬಂಧನವೂ ಆಗಿತ್ತು.. ಇದಾದ ಬೆನ್ನಲ್ಲೇ ಆರತಿ ದಯಾಳ್ ಅನಿಲ್ ವಿರುದ್ಧ ರೇಪ್ ಮತ್ತು ಅಟ್ರಾಸಿಟಿ ದೂರು ದಾಖಲಿಸಿದ್ಲು.. ಇದೇ ಪ್ರಕರಣದಲ್ಲಿ ವೈಟ್ ಫೀಲ್ಡ್ ಎಸಿಪಿ ನೇತೃತ್ವದ ತಂಡ ಸ್ಪಾಗೆ ಹೋಗಿ ತನಿಖೆ ಮಾಡಿತ್ತು. ಅತ್ಯಚಾರವೂ ನಡೆದಿಲ್ಲ.. ಇಲ್ಲಿ ಯಾವ ದಂಧೆಯೂ ನಡೆಯುತ್ತಿಲ್ಲ ಎಂದು ಬಿ ರಿಪೋರ್ಟ್ ಹಾಕಿದ್ರು.. ಆದ್ರೆ ಇದೀಗ ಏಕಾಏಕಿ ಸಿಸಿಬಿ ರೇಡ್ ಮಾಡಿದೆ..
ಈಗ್ಗೆ ತಿಂಗಳುಗಳ ಹಿಂದೆ ಸ್ಪಾ ದಿಂದ ಹೊರಬಿದ್ದು, ಅನಿಲ್ ವಿರುದ್ಧ ಮುರಿದುಕೊಂಡು ಬಿದ್ದ ಮೇಲೆ, ಆರತಿ ದಯಾಳ್ ಕಾಂಟಾಕ್ಟ್ ಬಳಸಿ ಸ್ಪಾ ಮೇಲೆ ದಾಳಿಗೆ ದಾರಿ ಮಾಡಿದ್ಲಾ..? ಇನ್ನು ಇದೀಗ ರಕ್ಷಿಸಲ್ಪಟ್ಟ ಹೆಣ್ಣು ಮಕ್ಕಳನೇಕರು, ಆರತಿ ದಯಾಳ್ ಪರಿಚಯಸ್ಥರು ಎನ್ನಲಾಗಿದೆ..ಇವರ ಮೂಲಕವೇ ಅಡ್ಡೆಯೊಳಗಿನ ಎವಿಡೆನ್ಸಗಳನ್ನ ಶೇಖರಿಸಿಕೊಂಡು ಪೊಲೀಸ್ರಿಗೆ ಕೊಟ್ಟಳಾ ಗೊತ್ತಿಲ್ಲ..ಇಂತಹದ್ದೊಂದು ಅನುಮಾನ ಕೂಡ ಇದೀಗ ಹೊಗೆ ಯಾಡುತ್ತಿದೆ.
ಇನ್ನು ಮಾಜಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ X ನಲ್ಲಿ ಗುಡುಗಿದ್ದಾರೆ. ಗೃಹ ಇಲಾಖೆಗೆ ಕೆಲವೊಂದು ಪ್ರಶ್ನೆಗಳನ್ನ ಮಾಡಿದ್ದಾರೆ.. ಬೇಲಿಯೇ ಎದ್ದು ಹೊಲ ಮೇಯ್ದರೂ ತೆಪ್ಪಗೆ ಇರುವ ಗೃಹ ಇಲಾಖೆಗೆ ನನ್ನ ಕೆಲವು ಪ್ರಶ್ನೆಗಳು ಅಂತ ಕೇಳಿದ್ದಾರೆ. ಸ್ಪಾ ದ ಅಸಲಿ ಕಥೆ ಏನು..? ವಿದೇಶಿ ಮಹಿಳೆಯರು ಯಾರು..? ಮಹಿಳಾ ಸಂರಕ್ಷಣ ವಿಭಾಗದ ಎಸಿಪಿ ಬದಲಾಗಿದ್ದು ಯಾಕೆ..? ಪೊಲೀಸ್ರಿಗೂ ಈ ಪ್ರಕರಣಕ್ಕೂ ಇರುವ ಲಿಂಕೇನು? 2 ತಿಂಗಳ ಹಿಂದೆ ಅತ್ಯಚಾರ ಪ್ರಕರಣ ದಾಖಲಿಸಿದ ಕೇಸ್ ಎಲ್ಲಿಗೆ ಬಂತು? ಸ್ಪಾ ನಡೆಸಲು ಬಿಟ್ಟಿರುವ ಗುಟ್ಟೇನು? ಸಿಸಿಟಿವಿ ಫೂಟೇಜ್ ಚೆಕ್ ಮಾಡಿ ರಕ್ಷಣೆ ನೀಡುವ ಪ್ರಭಾವಿಗಳನ್ನ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದ್ದಾರೆ..
ಇದೆಲ್ಲವನ್ನೂ ನೋಡಿದ್ರೆ, ಪ್ರಕರಣದ ಹಿಂದೆ ದೊಡ್ಡ ದೊಡ್ಡ ಖಾದಿಗಳು ಇರೋದು ಕನ್ಫರ್ಮ್.. ಇನ್ನು ಸಿಸಿಬಿ ಇನ್ಸೆಪೆಕ್ಟರ್ ರಾಜು ಕೊಟ್ಟಿರುವ ದೂರಿನ ಸೆಕ್ಸ್ ದಂಧೆಯ ಭಯಾನಕ ಸತ್ಯಗಳು ಅಡಗಿವೆ.. ಬ್ಯಾಂಕಾಂಕ್ ಮಾದರಿಯಲ್ಲಿ ಅಡ್ಡೆ ನಡೆಯುತ್ತಿತ್ತು.. ಗಿರಾಕಿಗಳು ಹುಡುಗಿಯರನ್ನ ಸೆಲೆಕ್ಟ್ ಮಾಡಿಕೊಂಡು ಹೋಗುವ ವ್ಯವಸ್ಥೆ ಇತ್ತು. ಇದೊಂದು ವ್ಯವಸ್ಥಿತ ದಂಧೆ ಅಂತ ಉಲ್ಲೇಖಿಸಿದ್ದಾರೆ.. ಮಹಾದೇವಪುರ ಠಾಣೆಯಲ್ಲಿ ಕೇಸು ರಿಜಿಸ್ಟರ್ ಆಗಿದೆ.. ಸರಿಯಾಗಿ ತನಿಖೆಯಾದ್ರೆ ಸತ್ಯ ಹೊರಬೀಳುತ್ತೆ..ಇಲ್ಲವಾದ್ರೆ, ನೋ ಯೂಸ್..