Wednesday, January 28, 2026
16.4 C
Bengaluru
Google search engine
LIVE
ಮನೆರಾಜ್ಯಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಸಿಸಿಬಿ ರೇಡ್​ನಿಂದ ಬಯಲಾಯ್ತು ಬೆಚ್ಚಿಬೀಳುವ ಸತ್ಯ.!

ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಸಿಸಿಬಿ ರೇಡ್​ನಿಂದ ಬಯಲಾಯ್ತು ಬೆಚ್ಚಿಬೀಳುವ ಸತ್ಯ.!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಓಲ್ಡ್​​ ಮದ್ರಾಸ್​ ರಸ್ತೆಯಲ್ಲಿರೋ ನಿರ್ವಾನ ಇಂಟರ್​​ ನ್ಯಾಷನಲ್​​ ಸ್ಪಾ ಮೇಲೆ ಶನಿವಾರ ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬಹುಮಹಡಿ ಕಟ್ಟಡದ ಫಸ್ಟ್​ ಪ್ಲೋರ್​ ಹಾಗೂ 6ನೇ ಪ್ಲೋರ್​​​ನಲ್ಲಿ ಸ್ಪಾ ನಡೆಯುತ್ತಿತ್ತು. ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಸಿಸಿಬಿ ಮಹಿಳಾ ಸಂರಕ್ಷಣಾ ದಳದಿಂದ ಈ ದಾಳಿ ನಡೆದಿದ್ದು, ಸುಮಾರು 4 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದೆ. ಅನಿಲ್​ ಎಂಬಾತ ಈ ಸ್ಪಾ ನಡೆಸುತ್ತಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಅನಿಲ್​ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸುತ್ತಿದ್ದನು. ಸದ್ಯ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಾಳಿ ವೇಳೆ 44 ಮಹಿಳೆಯರು ರಕ್ಷಣೆ, 34 ಗಿರಾಕಿಗಳು ಸೇರಿದಂತೆ 78 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಮಹದೇವಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಪಾ ಮಾಲೀಕ ಅನಿಲ್​ಗೆ ಸೇರಿದ ಮೂರವರೆ ಕೋಟಿ ಮೌಲ್ಯದ ಮರ್ಸಿಡೀಸ್​ ಬೆನ್ಜ್​ ಮೇ ಬ್ಯಾಕ್​ ಕಾರ್​​ ಸೀಜ್​ ಮಾಡಲಾಗಿದೆ.

ಸಿಸಿಬಿ ಎಸಿಪಿ ಧಮೇಂದ್ರ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಸುಮಾರು 10 ಜನ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ , ಶೋಧಕಾರ್ಯ  ನಡೆಸಿದ್ದಾರೆ.ಈ ಪ್ರಕರಣವನ್ನು ಪೊಳೀಸ್​ ಇಲಾಕೆ ಗಂಭೀರವಾಗಿ ಪರಿಗಣಿಸಿದೆ . ಉನ್ನತ ಮಟ್ಟದ ತನಿಖೆ ನಡೆಸಿ ಖುದ್ದು ನಿಗಾ ವಹಿಸುವಂತೆ ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ ಆದೇಶಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments