ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುವ ಕಳ್ಳಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಯಾವಾಗಲೂ ಭ್ರಷ್ಟಾಚಾರ, ಅಧಿಕಾರಿಗಳ ಕಳ್ಳಾಟದಿಂದ ಬಿಡಿಎ ಮರ್ಯಾದೆ ಹಾಳಾಗಿದೆ. ಹೀಗಾಗಿ ಬಿಡಿಎ ಬಗ್ಗೆ ಜನರಲ್ಲಿ ಇರೋ ವಿಶ್ವಾಸ ಕಡಿಮೆ ಆಗಿದೆ. ಬಿಡಿಎಯಲ್ಲಿ ಯಾವುದೇ ಕೆಲಸ ಆಗ್ಬೇಕು ಅಂದ್ರೇ ತುಂಬಾ ಟೈಂ ಬೇಕಾಗುತ್ತೆ. ಯಾವುದೂ ಸುಲಭಕ್ಕೆ ಆಗಲ್ಲ. ಇದರ ಜೊತೆಗೆ ಬಿಡಿಎ ಬಗ್ಗೆ ಈಗ ಮತ್ತೊಂದು ಅಪಸ್ವರ ಕೇಳಿ ಬಂದಿದೆ.
ಹೌದು, ಬಿಡಿಎಯಲ್ಲಿ ನಿವೃತ್ತ ಅಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಸರ್ಕಾರಲ್ಲಿ ನಿವೃತ್ತಿ ಹೊಂದಿದ್ದ ಈ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿದ್ದು, ಅನಗತ್ಯವಾಗಿ ನೌಕರರನ್ನು ನೇಮಕ ಮಾಡಿಕೊಂಡಿರುದ್ದಕ್ಕೆ ಬ್ರೇಕ್ ಹಾಕಲು ಮುಖ್ಯಕಾರ್ಯದರ್ಶಿ ರಜನೀಶ್ ಗೋಯೆಲ್ ಆದೇಶವೊಂದನ್ನು ಹೊರಡಿಸಿದ್ದರು. ನಿವೃತ್ತ ಎಲ್ಲಾ ನೌಕರರನ್ನ ವಿವಿಧ ಇಲಾಖೆಗಳಲ್ಲಿ ಕೂಡಲೇ ಬಿಡುಗಡೆಗೊಳಿಸಬೇಕೆಂದು ಜನವರಿ 23 ರ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು. ಆದರೆ ಒಂದು ತಿಂಗಳು ಕಳೆದರೂ ಆಯಾಕಟ್ಟಿನ ಸ್ಥಾನಗಳಲ್ಲಿ ಭದ್ರವಾಗಿ ತಳವೂರಿರುವ ನಿವೃತ್ತಿ ಸರ್ಕಾರಿ ಆಧಿಕಾರಿಗಳು ಕುರ್ಚಿ ಬಿಟ್ಟು ಕದಲುತ್ತಿಲ್ಲ. ತಮ್ಮ ಕೆಲ ಪ್ರಭಾವಿ ರಾಜಕಾರಣಗಳ ಕೃಪಕಟಾಕ್ಷದಿಂದ ಅಧಿಕಾರದಲ್ಲಿ ಮುಂದುವರೆದಿದ್ದಾರೆ. 2019ರಲ್ಲಿ ಬಿಡಿಎನಲ್ಲಿ ಸುಬ್ಬರಾವ್ ನಿವೃತ್ತಿ ಹೊಂದಿದ್ದರು. ಆದರೆ ಇಲ್ಲಿಯವರೆಗೂ ಸೇವೆಯಿಂದ ಬಿಡುಗಡೆಯಾಗಿಲ್ಲ. ಬಿಡಿಎ ಕೇಂದ್ರ ಕಚೇರಿಯಲ್ಲಿ ಕಮಿಷನರ್ ಪಿಎಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಿವೃತ್ತಿಯಾಗಿದರೂ ಬಿಡಿಎನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೇಲ್ವಿಚಾರಕ ಮಂಜುನಾಥ್ ಸಂಪತ್ ಕುಮಾರ್, ಹೊಸಳಯ್ಯ, ಚಿಕ್ಕೇಗೌಡ, ಶ್ರೀನಿವಾಸ್, ಪ್ರಕಾಶ್ ಡಿ.ಎನ್, ವೆಂಕಟಯ್ಯ, ಲಿಂಗಯ್ಯ, ಶಿವಲಿಂಗಯ್ಯ, ನಾರಾಯಣ ಸೇರಿ ಹಲವರನ್ನ ಸೇವೆಯಿಂದ ಬಿಡುಗಡೆ ಮಾಡಿದ್ದರು. ಆದರೆ ಸುಬ್ಬರಾವ್ ನಿವೃತ್ತಿಯಾಗಿದ್ರೂ ಸೇವೆಯಿಂದ ಬಿಡುಗಡೆ ಮಾಡಿಲ್ಲ. ಈಗಲೂ ಬಿಡಿಎನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಬಿಡಿಎ ನೌಕರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಡಿಎನಲ್ಲಿ ಪ್ರತಿ ಫೈಲ್ ನಲ್ಲೂ ನಿವೃತ್ತ ನೌಕರರ ಕೈಚಳಕ ತೋರುತ್ತಿದ್ದಾರೆ. ಇಲ್ಲಿ ಹೊಸಬರಿಗೆ ಕೆಲಸ ಮಾಡಲು ಇವರು ಬಿಡುತ್ತಿಲ್ಲ ಅನ್ನೋ ಆರೋಪ ಇದೆ. ಇದರಿಂದ ಬಿಡಿಎ ಅಂದ್ರೆ ಭ್ರಷ್ಟ ಅಧಿಕಾರಿಗಳ ತಾಣ ಎನ್ನುವಂತಾಗಿದೆ. ಇವರ ರಕ್ಷಣೆ ಮಾಡ್ತಿರೋರು ಯಾರು. ಒಂದೇ ಸ್ಥಳದಲ್ಲೇ ವರ್ಷಗಟ್ಟಲೆ ಕೆಲಸ ಮಾಡಿ ನಿವೃತ್ತಿಯಾದ್ರು ಸಿಬ್ಬಂದಿಗಳು ವರ್ಷಾನುಗಟ್ಟಲೇ ಹೇಗೆ ಇರಲು ಸಾಧ್ಯ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಕೂಡಲೇ ನಿವೃತ್ತ ನೌಕರರನ್ನ ಬಿಡುಗಡೆಗೊಳಿಸಿ ಅಂತ ಒತ್ತಾಯ ಮಾಡುತ್ತಿದ್ದಾರೆ. ಆದರೆ ಬಿಡಿಎ ಕಮಿಷನರ್ ಹಾಗೂ ಅಧ್ಯಕ್ಷರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದುನೋಡಬೇಕು.