ಬೆಂಗಳೂರು : ಬೆಂಗಳೂರು ಮೆಟ್ರೋ ಜಾಲ ವಿಸ್ತರಣೆ ಮಾಡುವ ಮೂಲಕ ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ನಗರದಲ್ಲಿ ಸಂಚರಿಸುತ್ತಿದ್ದ ನಮ್ಮ ಮೆಟ್ರೋ ಇದೀಗ ಹೊರ ಜಿಲ್ಲೆಗೂ ಕಾಲಿಡಲು ಸಿದ್ದವಾಗಿದೆ. ತುಮಕೂರುವರೆಗೂ ಮೆಟ್ರೋ ವಿಸ್ತರಣೆಗೆ ಟೆಂಡರ್ ಆಹ್ವಾನಿಸಿದ್ದು, ಮಾದಾವರಿಂದ ತುಮಕೂರಿನವರಿಗೆ ಮೆಟ್ರೋ ಸೇವೆ ಆರಂಭವಾಗಲಿದೆ.
ಹಸಿರು ಮಾರ್ಗವನ್ನು ನಗರದಾಚೆಗೆ ವಿಸ್ತರಿಸಲು ಬಿಎಂಆರ್ಸಿಲ್ ಪ್ಲಾನ್ ಮಾಡಿದೆ. ಟೆಂಡರ್ ಬಿಡ್ ಗಳನ್ನ ಸಲ್ಲಿಸಿಲು ಏಪ್ರಿಲ್ 2 ಕೊನೆಯ ದಿನವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಡಿಪಿಆರ್‌ಗೆ ಸೂಚನೆ ಕೊಟ್ಟಿದ್ದಾರೆ. ಇದೀಗ ತುಮಕೂರು ವರೆಗೆ ಮೆಟ್ರೋ ಮಾರ್ಗ ಕಾರ್ಯ ಸಾಧ್ಯತೆ ಅಧ್ಯಯನ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ.