ರಾಜ್ಯ

74 ಮಂದಿಯ ನಿಗಮ ಮಂಡಳಿ ಪಟ್ಟಿ ಫೈನಲ್ : ಇದು ಫ್ರೀಡಂ ಟಿವಿಯ ಎಕ್ಸ್‌ಕ್ಲ್ಯೂಸೀವ್‌ ಮಾಹಿತಿ

ಬೆಂಗಳೂರು : ಇದು ಫ್ರೀಡಂ ಟಿವಿಯ ಎಕ್ಸ್‌ಕ್ಲ್ಯೂಸೀವ್‌ ಮಾಹಿತಿ  ನಿರೀಕ್ಷೆಯಂತೆ ಮಕರ ಸಂಕ್ರಮಣದ ಬೆನ್ನಲ್ಲೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಕಾಂಗ್ರೆಸ್ ಹೈಕಮಾಂಡ್ ನಿಂದ ಹೊರಬಂದಿದೆ.. ಈಗ ಅವುಗಳ ಹಂಚಿಕೆ ಕಾರ್ಯ ಬಾಕಿ ಇದೆ. ಪಟ್ಟಿಯನ್ನ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಕಳಿಸಿಕೊಟ್ಟಿತ್ತು. ಇದೀಗ ನಿಗಮ ಮಂಡಳಿ ಪಟ್ಟಿ ಫೈನಲ್ ಆಗಿ ಹೊರ ಬಂದಿದೆ.. 74 ಮಂದಿಗೆ ನಿಗಮ ಮಂಡಳಿ ವಿವಿಧ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ.

ಇನ್ನು ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇಂದು ಸಂಜೆ ವೇಳೆಗೆ ಯಾರಿಗೆ ಯಾವ ಯಾವ ನಿಗಮ ನೀಡಲಾಗಿದೆ ಎಂಬ ಅಧಿಕೃತ ಘೋಷಣೆಯಾಗಲಿದೆ. ಅರಸೀಕರೆ ಶಾಸಕ ಶಿವಲಿಂಗೇಗೌಡ, ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಚಾಮರಾಜನಗರದ ಪುಟ್ಟರಂಗಶೆಟ್ಟಿ, ಹೆಚ್.ಡಿ ಕೋಟೆಯ ಅನಿಲ್ ಚಿಕ್ಕಮಾದು, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಾಗಡಿ ಬಾಲಕೃಷ್ಣ, ಚಳ್ಳಕೆರೆ ರಘುಮೂರ್ತಿ, ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್, ಹಾನಗಲ್ ಶ್ರೀನಿವಾಸ್ ಮಾನೆ, ಬಂಗಾರಪೇಟೆ ಎಸ್ ಎನ್ ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಸೇರಿದಂತೆ 37 ಮಂದಿಗೆ ನಿಗಮ ಮಂಡಳಿ ಭಾಗ್ಯ ದೊರಕಿದೆ.

Comments (0)

Your email address will not be published. Required fields are marked *

Back to top button