ಬೆಂಗಳೂರು: ನಟ ದರ್ಶನ್ ಅಭಿನಯದ ‘ಅರ್ಜುನ್’ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀರಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೀರಾ ಚೋಪ್ರಾ, ತಮ್ಮ ಬಾಯ್ಲೆಂಡ್ ರಕ್ಷಿತ್ ಕೇಜ್ರವಾಲ್ ಜೊತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ತಮ್ಮ ಕಾಲೇಜು ಸಮಯದ ಗೆಳೆಯ ರಕ್ಷಿತ್ ಜೊತೆ ಮೀರಾ ಚೋಪ್ರಾ ವಿವಾಹವಾಗಿದ್ದು, ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮೀರಾ ಚೋಪ್ರಾ ವಿವಾಹವಾಗಿರುವ ರಕ್ಷಿತ್ ಕೇಜ್ರವಾಲ್ ಉದ್ಯಮಿಯಾಗಿದ್ದು, ಅವರ ಕುಟುಂಬವು ಸಹ ಉದ್ಯಮಿಗಳ ಕುಟುಂಬವೇ ಆಗಿದೆ. 2008 ರಲ್ಲಿ ಬಿಡುಗಡೆ ಆಗಿದ್ದ ದರ್ಶನ್ ತೂಗುದೀಪ ನಟನೆಯ ‘ಅರ್ಜುನ್’ ಸಿನಿಮಾದಲ್ಲಿ ಮೀರಾ ನಾಯಕಿಯಾಗಿದ್ದರು.