Saturday, September 13, 2025
21.9 C
Bengaluru
Google search engine
LIVE
ಮನೆರಾಜ್ಯಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಉತ್ಸವ

ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸಂಕ್ರಾಂತಿ ಉತ್ಸವ

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ನ ನವರಾತ್ರಿ ವೃತ್ತದಲ್ಲಿ ಇಂದು ನವರಾತ್ರಿ ಮತ್ತು ನಂದಿನಿ ಉತ್ಸವ ಸಮಿತಿ ವತಿಯಿಂದ ಸಂಕ್ರಾಂತಿ ಉತ್ಸವ ಹಾಗೂ ಸ್ವಾಮಿ ವಿವೇಕಾನಂದ ರವರ ಜಯಂತಿ ಆಚರಣೆ ಮತ್ತು ರಾಮ ಜನ್ಮ ಭೂಮಿ ಗಾಗಿ ದುಡಿದ ರಾಮ ಕರಸೇವಕರಿಗೆ ಸನ್ಮಾನ ಸಮಾರಂಭ ನಡೆಯಿತು.

ಹಳ್ಳಿ ಸೊಗಡನ್ನು ಪರಿಚಯಿಸುವ ಈ ಮಕರ ಸಂಕ್ರಾಂತಿ ಉತ್ಸವಕ್ಕೆ ನು ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಹೇಮಲತಾ ಗೋಪಾಲಯ್ಯ ರವರು ಹಾಗೂ ನೂತನ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಎಸ್ ಹರೀಶ್ ಅವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಯಂಕಾಲ ನಡೆದ ಸಂಭ್ರಮದ ಸಂಕ್ರಾಂತಿ ಹಬ್ಬದಲ್ಲಿ ನಂದಿನಿ ಬಡಾವಣೆಯ ಹಾಗೂ ನೆರೆ ಹೊರೆಯ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮದ ಕಳೆ ಹೆಚ್ಚಿಸಿದರು .

ಇನ್ನು ಈ ಹಳ್ಳಿ ಸೊಗಡಿನ ಉತ್ಸವದಲ್ಲಿ ಗ್ರಾಮೀಣ ಕ್ರೀಡೆ ಗಳಾದ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಗೋವುಗಳ ಕಿಚ್ಚು ಹಾಯಿಸಲಾಯಿತು,ಜಾನಪದ ಹಾಡುಗಳ ನೃತ್ಯ ಪ್ರದರ್ಶನ ಸೇರಿದಂತೆ ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

ಈ ಬಾರಿಯ ಹಬ್ಬದ ವಿಶೇಷವೇನೆಂದರೆ ಅಯೋಧ್ಯೆಯಲ್ಲಿ 1992 ನೇ ಇಸವಿಯಲ್ಲಿ ರಾಮ ಜನ್ಮ ಭೂಮಿ ನಿರ್ಮಾಣಕ್ಕೆ ಕರಸೇವೆ ಮಾಡಿರುವ ಕರಸೇವಕರಾದ ಬಿಜೆಪಿ ಪಕ್ಷದ ಮಾಜಿ ಸಚಿವರಾದ ರಾಮಚಂದ್ರಗೌಡರು ಮ ಸುರೇಶ್ ಕುಮಾರ್ ಮಾಜಿ ಸಚಿವರು, ವಾಮನ್ ನಾಯಕ್, ವೆಂಕಟೇಶ್, ಸುಂದರ್ ರಾಜ್ ರೈ, ಮತ್ತು ಹನುಮಂತು, ರವರಿಗೆ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಹಾಗೂ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಎಸ್ ಹರೀಶ್, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್ ಸೇರಿ ಕರಸೇವಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಗೋಪಾಲಯ್ಯನವರು ಮಾತನಾಡಿ ಬೆಂಗಳೂರು ಮಹಾನಗರ ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ, ನಗರೀಕರಣದ ಮಧ್ಯೆ ಹಳ್ಳಿಯ ಸೊಗಡು ಮಾಯವಾಗುತ್ತಿದೆ, ಇಂತಹ ಸಮಯದಲ್ಲಿ ರಾಜೇಂದ್ರಕುಮಾರ್ ಅವರು ಈ ರೀತಿಯ ಕಾರ್ಯಕ್ರಮಗಳ ಆಯೋಜನೆ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿ ಬಡಾವಣೆಯಲ್ಲೂ ಈ ರೀತಿ ಕಾರ್ಯಕ್ರಮ ಪ್ರತಿ ಬಡಾವಣೆಯಲ್ಲಿ ನಡೆಯಬೇಕು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇದು ಸಹಾಯವಾಗುತ್ತದೆ ಎಂದು ಹೇಳಿದ ಅವರು ಬರುವ 22 ನೇ ತಾರೀಖು ಅಂದು ರಾಮಲಲ್ಲಾ ಪ್ರಾಣ ಪತಿಷ್ಟಾಪನ ನಡೆಯಲಿದ್ದು, ಈ ಸುದಿನ ಸಾಕಾರ ಗೊಳ್ಳಲು ಅಂದು ಬಾಬ್ರಿ ಮಸೀದಿ ಧ್ವಂಸ ಮಾಡಿ ಇಂದು ಭವ್ಯವಾದ ಶ್ರೀ ರಾಮಚಂದ್ರ ದೇವಸ್ಥಾನ ನಿರ್ಮಾಣವಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ವಿಶ್ವದ ಎಲ್ಲರೂ ಸಾಕ್ಷಿಯಾಗಲಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಜನರಿಗೆ ಆಯ್ಯೋಧ್ಯೆ ಶ್ರಿ ರಾಮನ ದರ್ಶನ ಮಾಡಲು ನಾನೇ ಸ್ವಂತ ಖರ್ಚಿನಲ್ಲಿ ರೈಲು ಬುಕ್ ಮಾಡಿ ಕಳಿಸಿಕೊಡ್ಲಾಗುವುದು . ಮತ್ತು ಮಹಾಲಕ್ಷ್ಮಿ ಲೇಔಟ್ ನ ರಾಣಿ ಅಬ್ಬಕ್ಕ ಕ್ರೀಡಾಂಗಣದಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ರಾಮತಾರಕ್ ಯಾಗ ಹಮ್ಮಿಕೊಳ್ಳಲಾಗಿದೆ.ಎಲ್ಲರೂ ಪಾಲ್ಗೊಳ್ಳಬೇಕು ಎಂದು ಗೋಪಾಲಯ್ಯ ಹೇಳಿದರು .ಈ ಬಾರಿ ಪೆಟ್ ಡಾಗ್ ಶೋ ಏರ್ಪಡಿಸಿ ನೆರೆದವರ ಸಂತೋಷ ಸಡಗರ ಹೆಚ್ಚಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments