ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಶ್ವಮೇಧ ಕ್ಲಾಸಿಕ್ ಹೊಸ ವಿನ್ಯಾಸದ 800 ಕರ್ನಾಟಕ ಸಾರಿಗೆ ಬಸ್ಗಳನ್ನ ಮೇ -2024ರ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ 100 ಬಸ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ನಿಗಮದ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದು, ಅಧ್ಯಕ್ಷತೆಯನ್ನು ಶಾಸಕ ರಿಝ್ವಾನ್ ಅರ್ಶದ್ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಶಕ್ತಿಯೋಜನೆ ಆರಂಭವಾದಾಗ 84 ಲಕ್ಷ ಜನ ಶಕ್ತಿ ಯೋಜನೆ ಜಾರಿ ನಂತರ 25ಲಕ್ಷ ಜನ ಹೆಚ್ಚುವರಿಯಾಗಿ ಒಡಾಡ್ತಿದ್ದಾರೆ. ಬಸ್ಗಳ ಕೊರತೆ ಹಿನ್ನೆಲೆ ನಾವು ಹೆಚ್ಚಿನ ಬಸ್ ಖರೀದಿಸ್ತಿದ್ದೇವೆ ಎಂದರು.
ಏಪ್ರಿಲ್ ವೇಳೆಗೆ ನಾಲ್ಕು ನಿಗಮಕ್ಕೆ ಸೇರಿ 5ಸಾವಿರ ಬಸ್ ಗಳ ಖರೀದಿ ಆಗಲಿದೆ. ಸಾರಿಗೆ ನಿಗಮಗಳಲ್ಲಿ ನೇಮಕಾತಿ ಆಗಿರಲಿಲ್ಲ ಇದೀಗ 9 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಮೆಕಾನಿಕ್ ಸಿಬ್ಬಂದಿಗಳನ್ನ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಕ್ತಿಯೋಜನೆ ಘೋಷಣೆ ವೇಳೆ ಹಾಗೂ ಯೋಜನೆ ಜಾರಿ ನಂತರವೂ ವಿರೋದ ಪಕ್ಷ ಟೀಕೆ ಮಾಡಿತ್ತು. ಮಾಜಿ ಮುಖ್ಯಮಂತ್ರಿ ಒಬ್ಬರು ಬಸ್ ಎಲ್ಲೆಂದರಲ್ಲೇ ನಿಲ್ಲುತ್ತೆ ಎಂದು ಟೀಕೆ ಮಾಡಿದ್ರು. ಆದ್ರೆ ನಾವು ಯಶಸ್ವಿಯಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಶಕ್ತಿಯೋಜನೆ ನಿಂತು ಹೋಗುತ್ತೆ ಎಂದಿದ್ರು. ಯಾವುದೇ ಕಾರಣಕ್ಕೂ ಶಕ್ತಿಯೋಜನೆ ನಿಲ್ಲಲ್ಲ. ಯಶಸ್ವಿಯಾಗಿ ಮುಂದುವರೆಯುತ್ತಿದೆ. ಮುಂದೆಯೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಶಕ್ತಿ ಯೋಜನೆ ಮುಂದುವರಿಯುತ್ತದೆ ಎಂದು ರಾಮಲಿಂಗರೆಡ್ಡಿ ಹೇಳಿದರು.