ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಶ್ವಮೇಧ ಕ್ಲಾಸಿಕಲ್ ಎಂಬ 100 ಹೊಸ ಬಸ್ಗಳನ್ನು ಪರಿಚಯಿಸಲಿದೆ. ನಾಳೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮೇಲೆ ನೂರು ಹೊಸ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಲಿದ್ದಾರೆ. ಈ ಬಸ್ಗಳು ಹೊಸ ವಿನ್ಯಾಸವನ್ನು ಹೊಂದಿದ್ದು, ವಿಶಾಲವಾದ ಲೆಗ್ರೂಮ್ ಅನ್ನು ಹೊಂದಿದೆ. ಹಲವಾರು ವಿಶಿಷ್ಟ್ಯ ಗಳನ್ನು ಹೊಂದಿರುತ್ತವೆ.
ಬಸ್ಗಳು ಪಾಯಿಂಟ್ -ಟು – ಪಾಯಿಂಟ್ ಎಕ್ಸ್ಪ್ರೆಸ್ ವಾಹನಗಳಾಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಅವು ವಿವಿಧ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಚಲಿಸುತ್ತವೆ. ಕೆಲವು ವೈಶಿಷ್ಟ್ಯಗಳು ವಾಹನ ಸ್ಥಳ ಟ್ಯ್ರಾಕರ್, ಪ್ಯಾನಿಕ್ ಬಟನ್ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಒಳಗೊಂಡಿವೆ.