ಬೆಂಗಳೂರು – ಕೋರಮಂಗಲ ಪಬ್‌ಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರ ಆಗಿದೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದೇ ಡಿ.೧೨ ರಂದು ಕೋರಮಂಗಲ ಪಬ್‌ಯೊಂದಕ್ಕೆ ತೆರಳಿದ ವೇಳೆ ಆಕೆ ಪ್ರಜ್ಞಾಹೀನಳಾಗಿದ್ದಾಳೆ, ಪ್ರಜ್ಞೆ ಬಂದ ಬಳಿಕ ಆಡುಗೋಡಿಯ ದೇವೆಗೌಡ ಲೇಔಟ್‌ನಲ್ಲಿ ಇರುವುದನ್ನ ಕಂಡು ಶಾಕ್ ಆಗಿದ್ದಾಳೆ.
ಪ್ರಜ್ಷಾಹೀನಳಾಗಿದ್ದ ಮಹಿಳೆ ಮುಂದೆ ಮಾಡಿದ್ದೇನು..? ಅಂತಹದ್ದೇನಾಯಿತು…?
ಮಹಿಳೆ ಟೆಕ್ಕಿಗೆ ಪ್ರಜ್ಷೆ ಬಂದಾಗ ಯುವತಿ ದೇವೆಗೌಡ ಲೇಔಟ್ ಮನೆಯೊಂದರ ಬಾಗಿಲು ಬಡಿದಿದ್ದಾಳೆ, ಆಕೆಯನ್ನ ಕಂಡ ಸ್ಥಳೀಯರು ಕೂಡಲೇ ಪೊಲೀಸ್ ಸಹಾಯವಾಣಿ ೧೧೨ ಕರೆ ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿದ್ದಾರೆ.

ಬಳಿಕ ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ನನ್ನ ಮೇಲೆ ಅತ್ಯಾಚಾರ ಆಗಿರಬಹುದು ಎಂಬುದಾಗಿ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾಳೆ.
ದೂರು ದಾಖಲಿಸಿಕೊಂಡ ಕೋರಮಂಗಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಬಗ್ಗೆ ಡಿಸಿಪಿ ಸಿ.ಕೆ. ಬಾಬಾ ಹೇಳಿದ್ದೇನು..?
ಇದೇ ಡಿ. ೧೨ ರಂದು ಒರ್ವ ಮಹಿಳೆ ರಾತ್ರಿ ೮.೩೦ ಕೋರಮಂಗಲದ ಪಬ್‌ಗೆ ಊಟಕ್ಕೆ ಹೋಗಿದ್ದಾರೆ. ಸುಮಾರು ೮.೩೦ ರಿಂದ ೧೧.೩೦ರವರೆಗೆ ಪಬ್ ನಲ್ಲಿರುತ್ತಾರೆ, ಒಂದಿಷ್ಟು ಜನರ ಬಳಿ ಮಾತನಾಡಿರೋದು ನಮಗೆ ತಿಳಿದುಬಂದಿದೆ. ೧೧.೩೦ನಿಂz ೧೨..೩೦ರವೆಗೆ ಪ್ರಜ್ಞಾಹೀನಾಳಾಗಿದ್ದೆ ನನಗೆ ಏನ್ ಆಗಿದೆ ಎಂಬುದು ಗೊತ್ತಾಗಿಲ್ಲ, ಇದರ ಬಗ್ಗೆ ತನಿಖೆ ಮಾಡಿ ಎಂದು ದೂರಿನಲ್ಲಿ ಹೇಳಿದ್ದಾರೆ. ಅದರ ಪ್ರಕಾರ ಅವರು ಕೊಟ್ಟಿರೋ ದೂರಿನ ಸಂಬAಧ ಮಹಿಳೆ ಹೇಳಿರೋ ಸಮಯ ನಮಗೆ ಮ್ಯಾಚ್ ಆಗ್ತಾ ಇಲ್ಲ. ಆಕೆಯ ದೂರಿನ ಆಧಾರದ ಮೇಲೆ ತನಿಖೆ ಮಾಡುತ್ತೇವೆ ಎಂದು ಡಿಸಿಪಿ ಸಿ.ಕೆ. ಬಾಬಾ ತಿಳಿಸಿದರು.