ಬೆಂಗಳೂರು : ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಸರಕಾರಕ್ಕೆ ೧೦೯. ೧೯ ಕೋಟಿ ನಷ್ಟ ಮಾಡಿದ ಆರೋಪದ ಮೇಲೆ ಕಿಯೋನಿಕ್ಸ್ ಎವೆರಾನ್ ವ್ಯಸ್ಥಾಪಕ ನಿರ್ದೇಶಕರು ಹಾಗೂ ಸರಕಾರದ ಉಪ ಕಾರ್ಯದರ್ಶಿ ವಿರುದ್ಧ ದೂರು ದಾಖಲಾಗಿದೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆ ನೀಡಲು ೨೦೦೯ -೨೦೧೦ ರಲ್ಲಿಐಸಿಟಿ ೩ ಯೋಜನೆ ರೂಪಿಸಲಾಗಿತ್ತು.
೧೪೭.೬೯ ಕೋಟಿ ಮೊತ್ತದ ಯೋಜನೆಯನ್ನು ಸರಿಯಾಗಿ ನಿಭಾಯಿಸದೆ ಅಂದಿನ ಕಿಯೋನಿಕ್ಸ್ ವ್ಯಸ್ಥಾಪಕ ನಿರ್ದೇಶಕ ಹರಿಕುಮಾರ್ ಝ ಚೆನ್ನೈನ ಎವೆರಾನ್ ಕಂಪೆನಿ ವ್ಯಸ್ಥಾಪಕ ನಿರ್ದೇಶಕ ಪಿ. ಕಿಶೋರ್ ಹಾಗು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದ ಐಎಫ್ ಮಾಗಿ ಯವರು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ವಿಭಾಗದ ನಿರ್ದೇಶಕರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಇದನ್ನು ಆಧರಿಸಿ ಪೊಲೀಸರು FIR ದಾಖಲಿಸಿದ್ದಾರೆ ಅಂದು ಮುಖ್ಯ ಮಂತ್ರಿಯಾಗಿದ್ದ ಬಿ ಎಸ್ ಯೆಡಿಯೂರಪ್ಪ ಹಾಗು ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಪುಟದ ಒಪ್ಪಿಗೆ ಪಡೆದು ೪೩೯೬ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಸ್ಕ್ಯಾನರ್ ಡಿಜಿಟಲ್ ಕ್ಯಾಮರಾ ಪ್ರಿಂಟರ್ LCD ಪ್ರಾಜೆಕ್ಟರ್ ಸೇರಿದಂತೆ ಹಾರ್ಡ್ ವೇರ್ ಉಪಕರಣಗಳನ್ನು ಪೂರೈಸಲು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮಕ್ಕೆ ಕಿಯೋನಿಕ್ಸ್ ಗುತ್ತಿಗೆ ನೀಡಿದ್ದರು.
ಕಿಯೋನಿಕ್ಸ್ ಸಂಸ್ಥೆಯು ನಿಯಮ ಉಲ್ಲಂಘಿಸಿ ಚೆನ್ನೈ ನ ಎವೆರಾನ್ ಕಂಪೆನಿಗೆ ಉಪ ಗುತ್ತಿಗೆ ನೀಡಿತ್ತು ಅಲ್ಲದೆ ೫ ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅನುಷ್ಠಾನ ಗೊಳಿಸಿದ ಯೋಜನೆಯಲ್ಲಿ ಶಾಲೆಗಳಲ್ಲಿ ಹಾರ್ಡ್ ವೇರ್ ಪೂರೈಸುವ ಮೊದಲೇ ಒಂದೇ ಬಾರಿಗೆ ಸಾಫ್ಟ್ ವೇರ್ ಖರೀದಿಸಲಾಗಿತ್ತು. ಇದರಿಂದ ಇಲಾಖೆಗೆ ಆರ್ಥಿಕ ನಷ್ಟ ಮಾಡಲಾಗಿತ್ತು ಈ ಕುರಿತು ತನಿಖೆ ನಡೆಸಲು ೧೦ ವರ್ಷಗಳ ಹಿಂದೆಯೇ ಐಎಎಸ್ ಅಧಿಕಾರಿ ಜಿವಿ ಕೃಷ್ಣರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು ಸಮಿತಿ ೫ ಬಾರಿ ವರದಿ ಸಲ್ಲಿಸಿದರು ಲೋಪಗಳನ್ನ ಪಟ್ಟಿ ಮಾಡಿ ಪ್ರತಿ ಬಾರಿಯ ವರದಿ ತಿರಸ್ಕರಿಸಲಾಗಿತ್ತು.