ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ಕಾವೇರಿ ನೀರು ಸಿಗದೆ ಜನ ಪರಾದಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ಜನತೆಗೆ ಜಲ ಮಂಡಳಿ ಶಾಕ್ ಕೊಟ್ಟಿದೆ. ಬೇಸಿಗೆ ನಡುವೆ ತುರ್ತು ನಿರ್ವಾಹಣ ಕಾಮಗಾರಿ ಕೈಗೆತ್ತಿಕೊಂಡಿದೆ. ಫೆಬ್ರವರಿ 27 ಬೆಳಗ್ಗೆ 6 ಗಂಟೆಯಿಂದ 28 ಬೆಳಗ್ಗೆ 6 ಗಂಟೆವರೆಗೂ ಜಲಮಂಡಳಿ ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ 24 ಗಂಟೆಗಳ ಕಾಲ ಅರ್ಧ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.
ಫೆ.27 ತಾರೀಖು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕಾವೇರಿ ನೀರು ಬರಲ್ಲ ಗೊತ್ತಾ?
ಬಿ.ಹೆಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, 4ನೇ ಬ್ಲಾಕ್ ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ & ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್.ಜಿ.ಇ.ಎಫ್ ಲೇಔಟ್, ಪಾರ್ಟ್ ಆಫ್ ಐ.ಟಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೆ ಲೇಔಟ್, ಆರ್.ಹೆಚ್.ಬಿ.ಸಿ.ಎಸ್ ಲೇಔಟ್ 1ನೇ & 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣ ಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ರೇಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ, ಕಂದಾಯ ಲೇಔಟ್, ಮುಳಕಟ್ಟಮ್ಮ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿ ಪಾಳ್ಯ, ಬಿ.ಇ.ಎಲ್ 1ನೇ & 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ. ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ. ವಿಶ್ವೇಶರಯ್ಯ ಲೇಔಟ್ 1ನೇ ಬ್ಲಾಕ್ ರಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ ವಾಡ್-12, ಮಲ್ಲಸಂದ್ರ ವಾರ್ಡ್-13. ಬಗಳಗುಂಟೆ ವಾರ್ಡ್-14. ದಾಸರಹಳ್ಳಿ ವಾರ್ಡ್-15, ಜಾಲಹಳ್ಳಿ ವಾರ್ಡ್-16, ಹೆಚ್.ಎಂ.ಟಿ ವಾರ್ಡ್-38, ಚೊಕ್ಕಸಂದ್ರ ವಾರ್ಡ್-39, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ವಾರ್ಡ್-41, ಲಕ್ಷಮ್ಮದೇವಿ ನಗರ ವಾರ್ಡ್-42, ಲಗ್ಗೆರೆ ವಾರ್ಡ್-69, ರಾಜಗೋಪಾಲನಗರ ವಾರ್ಡ್-70, ಹೆಗ್ಗನಹಳ್ಳಿ ವಾರ್ಡ್- 71, ಕೋಟ್ಟಿಗೆಪಾಳ್ಯ ವಾರ್ಡ್-73, ಹೇರೋಹಳ್ಳಿ ವಾರ್ಡ್-72, ಐಡಿಯಲ್ ಹೋಮ್ 1ನೇ ಮತ್ತು 2ನೇ ಫೇಸ್, ಬಿ.ಹೆಚ್.ಇ.ಎಲ್ ಲೇಔಟ್, ಕೆಂಚನಹಳ್ಳಿ, ಜವರೆಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕಾನ್‌ಕಾರ್ಡ್ ಲೇಔಟ್, ಕೃಷ್ಣಪ್ಪ ಗಾರ್ಡನ್, ಸ್ಟ್ರೀಟ್ ಹೋಮ್ಸ್, ಬಿ.ಹೆಚ್.ಇ.ಎಲ್ ಲೇಔಟ್ ನಲ್ಲಿ ನೀರಿ ಇರುವುದಿಲ್ಲ.