ಅಪ್ಪು ಜನುಮ ದಿನವನ್ನ ಕರುನಾಡು ಕೊಂಡಾಡುತ್ತಿದೆ. ಕರ್ನಾಟಕ ತುಂಬೆಲ್ಲ ಅಪ್ಪು ಮಯವಾಗಿದೆ. ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಲ ಚಿತ್ರಮಂದಿರದಲ್ಲಿ ಅಪ್ಪು ಜಾಕಿ ಸಿನಿಮಾವನ್ನ ಮರು ಪ್ರದರ್ಶನ ಮಾಡಲಾಗುತ್ತಿದೆ. ಥಿಯೇಟರ್ ಗಳೆಲ್ಲ ಹೌಸ್ ಫುಲ್ ಅಪ್ಪು ನೆನೆದು ಸಾಕಷ್ಟು ಅಭಿಮಾನಿಗಳು ಭಾವುಕರಾಗಿದ್ದಾರೆ.
ಕರ್ನಾಟಕದ ಮೂಲೆ ಮೂಲೆಯಿಂದಲೂ ಅಪ್ಪು ಅಭಿಮಾನಿಗಳಿಂದ ವಿಶೇಷ ಪೂಜೆ ಮತ್ತು ಬಡ ಮಕ್ಕಳಿಗೆ ಅನ್ನದಾನ ಕಾರ್ಯಕ್ರಮವು ನಡೆಯುತ್ತಿದೆ. ವಿಶೇಷವಾಗಿ ಅಪ್ಪು ನಟಿಸಿರುವ ಜಾಕಿ ಸಿನಿಮಾ ನೋಡಲು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನ ತಮಿಳ್ ಅಭಿಮಾನಿಯೊಬ್ಬ ಬೆಂಗಳೂರಿಗೆ ಬಂದಿದ್ದು ಜಾಕಿ ಸಿನಿಮಾ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಈ ರೋಡ್ ಮೂಲದ ಅಭಿಮಾನಿ ಜಾಕಿ ನೆನೆದು ಭಾವುಕರಾದರು. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ, ನಮ್ಮ ಮನದಲ್ಲಿ ಸದಾ ಇರಲಿದ್ದಾರೆ ಎಂದರು.