ಬೆಂಗಳೂರು : ಸಂಸದ ಪ್ರತಾಪ್‌ಸಿಂಹಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ, ಮಾಜಿ ಸಚಿವ, ಎಂಎಲ್‌ಸಿ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಪ್ರತಾಪ್ ಸಿಂಹ ಮೈಸೂರು ಕೊಡಗಿನ ಸಂಸದರಾಗಿ ಕೆಲಸ ಮಾಡಿದ್ದಾರೆ. ಪಕ್ಷ ಯಾವುದೇ ಇದ್ರೂ ಕೆಲಸ ಮಾಡಿದ್ದಾರೆ. ನಮ್ಮ ಕೆಲಸಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆ ಜನ ಗಮನಿಸ್ತಾರೆ ಎಂದರು.
ಪ್ರತಾಪ್‌ಸಿಂಹಗೆ ಅವರ ಹೇಳಿಕೆಗಳು, ನಡವಳಿಕೆಗಳೇ ಮುಳುವು. ಮೈಸೂರು ಮಹಾರಾಜರಾಗಿ ಒಂದು ಪಟ್ಟು ಜಾಸ್ತಿ ಕೆಲಸ ಮಾಡಿದ್ದೀನಿ ಅಂದ್ರು, ಮಹಾರಾಜರು ಎಲ್ಲಿ, ಪ್ರತಾಪ್ ಸಿಂಹ ಎಲ್ಲಿ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ದೇ ನಾನೇ ಬುದ್ದಿವಂತ, ನಾನೆ ಮೇಲೂ ಎಂಬ ದುರಂಕಾರದ ಹೇಳಿಕೆಗಳಿಂದ ಟಿಕೆಟ್ ಮಿಸ್ ಆಗಿರಬಹುದು ಅಂತ ಹೇಳಿದ್ದಾರೆ