ಬೆಂಗಳೂರು : ಬಿಸ್ವೈ ಪುತ್ರ ಹಾಲಿ ಸಂಸದ ರಾಘವೇಂದ್ರ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲೇ ಈಗ ಈಶ್ವರಪ್ಪ ಸ್ಪರ್ಧೆ ಮಾಡಬೇಕೆನ್ನುವ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಈಶ್ವರಪ್ಪ ಅವರು ಪುತ್ರನಿಗೆ ಕೈತಪ್ಪಿರುವ ಟಿಕೆಟ್ ಬಳಿಕ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯ ರಾಜ್ಯ ರಾಜಕೀಯದಲ್ಲಿ ತೀವ್ರ ಮಹತ್ವ ಪಡೆದುಕೊಂಡಿದೆ.
ಹಾವೇರಿ ಲೋಕಸಭಾ ಕ್ಷೇತ್ರವೂ ಹೊಸತಲ್ಲ. ಹೀಗಾಗಿ ಹಾವೇರಿಯಲ್ಲಿ ಸಮರ್ಥ ಅಭ್ಯರ್ಥಿ ಯಾರು..? ಗೆಲುವಿನ ಕುದುರೆ ಯಾರು..? ಯಾರಿಗೆ ಟಿಕೆಟ್ ನೀಡಿದರೆ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಲೆಕ್ಕಚಾರದಲ್ಲಿ ಬಿಜೆಪಿಯಿದೆ. ನಿಮಗೆ ಅನ್ಯಾಯವಾಗಿದೆ ಎಂದು ಹಿತೈಷಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಮಾರ್ಚ್ 15ರಂದು ಬಂಗಾರ ಭವನದಲ್ಲಿ ಸಭೆಯನ್ನೂ ಸಹ ಕರೆದಿದ್ದಾರೆ. ನಾನು ಸಹ ಪಾಲ್ಗೊಳ್ಳುತ್ತಿದ್ದೇನೆ. ಯಾವುದೇ ಸಮಸ್ಯೆಗಳ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುವ ಸಂಸ್ಕಾರವನ್ನು ಪಕ್ಷ ನನಗೆ ಹೇಳಿಕೊಟ್ಟಿದೆ. ಹೀಗಾಗಿ, ಸಭೆಯಲ್ಲಿ ಏನೆಲ್ಲಾ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂದು ನೋಡೋಣ ಎಂದರು.
ಈಶ್ವರಪ್ಪ ಒಂದು ವೇಳೆ ಕಾಂತೇಶ್‌ಗೆ ಹಾವೇರಿಯಿಂದ ಟಿಕೆಟ್ ಸಿಗದೇ ಇದ್ದರೆ, ಬೆಂಬಲಿಗರ ಅಭಿಪ್ರಾಯ ತೆಗೆದುಕೊಂಡು ಶಿವಮೊಗ್ಗದಲ್ಲಿ ತಾನೇ ಕಣಕ್ಕಿಳಿಯುವುದಾಗಿ ಸ್ವಷ್ಟವಾಗಿ ತಿಳಿಸಿದ್ದಾರೆ. ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಸ್ಪರ್ಧೆಗಳಿಯುವುದಾಗಿ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ.