Tuesday, April 29, 2025
29.1 C
Bengaluru
LIVE
ಮನೆರಾಜಕೀಯದಿಢೀರ್ ಡಿಸಿಎಂ ಡಿಕೆಶಿ ಭೇಟಿಯಾದ ಲಕ್ಷ್ಮಣ ಸವದಿ

ದಿಢೀರ್ ಡಿಸಿಎಂ ಡಿಕೆಶಿ ಭೇಟಿಯಾದ ಲಕ್ಷ್ಮಣ ಸವದಿ

ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್​​ ಬಿಜೆಪಿಗೆ ವಾಪಸ್​​ ಹೋದ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್​ ಅಲರ್ಟ್​ ಆಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಡಿಸಿಎಂ ಅಥಣಿ ಶಾಸಕ ಲಕ್ಷ್ಮಣ ಸವದಿ ಡಿಸಿಎಂ ಡಿಕೆಶಿಯನ್ನು ಭೇಟಿಯಾಗಿದ್ದಾರೆ. ಶೆಟ್ಟರ್​ ವಾಪಸ್​​ ಹೋದ ಬೆನ್ನಲ್ಲೇ ಸವದಿ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ. ಸವದಿ ಭೇಟಿಯಾದ ಫೋಟೋವನ್ನ ಸ್ವತಃ ಡಿ.ಕೆ ಶಿವಕುಮಾರ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಂತ್ರಿ ಸ್ಥಾನ ಸಿಗದೆ ಬೇಸರಗೊಂಡಿರುವ ಸವದಿ ವಾಪಸ್​ ಬಿಜೆಪಿಗೆ ಹೋಗುತ್ತಾರೆ ಎಂಬ ಗುಸುಗುಸು ಇದೆ. ಆದ್ರೆ ತಾನು ಬಿಜೆಪಿಗೆ ಹೋಗಲ್ಲ ಅಂತಾ ಹಲವು ಬಾರಿ ಸವದಿ ಹೇಳಿದ್ದಾರೆ. ಶೆಟ್ಟರ್​​ ಬಿಜೆಪಿಗೆ ಹೋಗುತ್ತಿದ್ದಂತೆ ಸವದಿ ನಡೆ ಏನು ಎಂಬುವುದು ಕುತೂಹಲ ಮೂಡಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments