ಫ್ಯಾಷನ್ ಡಿಸೈನರ್ ಎಂದೆನಿಸಿಕೊಂಡಿರುವ ಪವಿತ್ರಗೌಡ ಅವರು ದರ್ಶನ್ ಜತೆ ಇರುವ ಹಲವು ಫೋಟೊಗಳ ರೀಲ್ಸ್ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼ ಎಂದು ಕ್ಯಾಪ್ಷನ್ ಕೊಟ್ಟು ಶೇರ್ ಮಾಡಿಕೊಂಡಿದ್ದರು. ಇದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ದರ್ಶನ್ ಜತೆಗೆ ಪವಿತ್ರಾ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಹಾಗಾದ್ರೆ ಈ ಪವಿತ್ರಾ ಯಾರು?
ಪವಿತ್ರಾ ಗೌಡ ಅವರು ಮಾಡೆಲ್ ಹಾಗೂ ನಟಿ. ಅಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಮುಂಚೆ ಪವಿತ್ರಾ ಅವರು ದರ್ಶನ್ರ ತಾಯಿ ಹಾಗೂ ಸಹೋದರಿ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆದವು. ಇದಾದ ಮೇಲೆ ದರ್ಶನ್ ಸಿನಿಮಾ ಸೆಟ್‌ಗಳಲ್ಲಿ ಪವಿತ್ರಾ ಅವರು ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದೂ ಇದೆ.
ಕಳೆದ ವರ್ಷ ದರ್ಶನ್ ಅವರ ಜನುಮದಿನ ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ದರ್ಶನ್ ಜತೆಗೆ ಪವಿತ್ರಾ ಕೂಡ ಇದ್ದರು. ಮೊದಲ ಬಾರಿಗೆ ಇದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ದರ್ಶನ್ರ ಪತ್ನಿ ವಿಜಯಲಕ್ಷ್ಮಿ, ಮೇಘಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮೇಘ ಶೆಟ್ಟಿ ಫೋಟೊ ಡಿಲಿಟ್ ಮಾಡಿದ್ದರು.
ಪವಿತ್ರಾ ಗೌಡ ಅವರಿಗೆ ಖುಷಿ ಎಂಬ ಮಗಳಿದ್ದಾಳೆ. ನಾಲ್ಕು ತಿಂಗಳ ಹಿಂದಷ್ಟೆ ಪುತ್ರಿ ಜತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಆಗಲೂ ವಿಜಯಲಕ್ಷ್ಮಿ ಪವಿತ್ರಾ ವಿರುದ್ಧ ಮುರುಕೊಂಡು ಬಿದ್ದಿದ್ದರು. ಇದೀಗ ದರ್ಶನ್ ಹಾಗೂ ನನ್ನ ಸ್ನೇಹಕ್ಕೆ 10 ವರ್ಷ ಅಂತ ಬರೆದುಕೊಂಡು ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇದೇ ವಿಚಾರವಾಗಿ ಮತ್ತೊಂದು ಸುತ್ತಿಗೆ ವಾರ್ ಶುರುವಾಗಿದೆ.
ಇದೀಗ ಇವರಿಬ್ಬರ ನಡುವೆ ಟ್ವೀಟ್ ವಾರ್ ಆರಂಭವಾಗಿದೆ. ವಿಜಯಲಕ್ಷ್ಮಿ ಕಾನೂನು ಮೊರೆ ಹೊಕ್ಕಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕು.