ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಕೂಡ ಸಂವಿಧಾನ ಹಾಗೂ ರಾಷ್ಟ್ರೀಯ ಏಕತೆ ಸಮಾವೇಶ ನಡೆಸಲಾಯ್ತು. ಸಮಾರಂಭದಲ್ಲಿ ಭಾಗಿಯಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸಮಾರೋಪ ಬಿಜೆಪಿ ವಿರುದ್ಧ ಪರೋಕ್ಷವಾಗಿ ರಣಕಹಳೆ ಮೊಳಗಿಸಿದ್ರು.
ಸಂವಿಧಾನದ ಪೀಠಿಕೆ , ಮಹತ್ವವನ್ನ ರಾಜ್ಯದ ಜನರಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು. ಸಂವಿಧಾನಕ್ಕೆ 75 ವರ್ಷಗಳು ಪೂರ್ಣಗೊಂಡ ಹಿನ್ನಲೆ ಜನವರಿ 26 ರ ಗಣರಾಜ್ಯೋತ್ಸವದಂದು ಸಿಎಂ ಸಿದ್ದರಾಮಯ್ಯ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಈ ಹಿನ್ನಲೆ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಟ್ಯಾಬ್ಲೋಗಳ ಮೆರವಣಿಗೆ ಮಾಡಲಾಗಿತ್ತು. ಈ ಮೂಲಕ ಸಂವಿಧಾನದ ಮಹತ್ವವನ್ನ ಜನರಿಗೆ ತಿಳಿಸಲಾಯ್ತು. ಸಂವಿಧಾನ ಹಾಗೂ ರಾಷ್ಟ್ರೀಯ ಏಕತೆ ಸಮಾವೇಶ ಸಮಾರೋಪದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ರು. ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸಿದ್ರು.
ಈ ದೇಶದಲ್ಲಿ ಸಾರ್ವಾಧಿಕಾರ ಜಾರಿ ಆಗುತ್ತೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕೊನೆ ಹನಿ ರಕ್ತ ಇರುವವರೆಗೆ ಸಂವಿಧಾನಕ್ಕಾಗಿ ಹೋರಾಡಬೇಕು ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು. ನಮ್ಮದು ಗ್ಯಾರಂಟಿ, ನಿನ್ನದ್ಯಾವುದಪ್ಪಾ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತ ಹೇಳ್ತಾ ಇದ್ದಾರೆ. ಹೀಗೇ ಆದ್ರೆ ದೇಶ ಡಿಕ್ಟೇಟರ್ ಶಿಪ್ ನತ್ತ ದೇಶ ಹೋಗುತ್ತೆ. ನೀವೆಲ್ಲ ಹುಷಾರಾಗಿ ಇರಬೇಕು, ಜಾಗೃತರಾಗಿರಬೇಕು. ಮನೆಮನೆಗೂ ಸಂವಿಧಾನದ ಬಗ್ಗೆ ತಿಳಿಸಬೇಕು ಅಂತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು.
ಇದು ರಾಜಕೀಯ ಸಮಾವೇಶ ಅಲ್ಲ: ಡಾ. ಹೆಚ್ ಸಿ ಮಹದೇವಪ್ಪ
ರಾಜಕಾರಣ ಇಟ್ಟುಕೊಂಡು ಮಾಡಿದ ಸಮಾವೇಶ ಅಲ್ಲ. ಆಡಳಿತ ವ್ಯವಸ್ಥೆ ಬಲಪಡಿಸೋಕೆ ಅಂಬೇಡ್ಕರ್ ವೈವಿಧ್ಯತೆಯಲ್ಲಿ ಏಕತೆ ಇರುವ ಸಂವಿಧಾನ ಕೊಟ್ಟಿದ್ದಾರೆ. ಅಸ್ಪೃಶ್ಯತೆ ಇನ್ನೂ ನಿವಾರಣೆ ಆಗಿಲ್ಲ. ಭಾಷೆ, ಜಾತಿ, ಧರ್ಮದ ಹೆಸರಲ್ಲಿ ದೇಶ ಹೊಡೆಯುತ್ತಿದ್ದಾರೆ. ಚುನಾವಣೆಯಲ್ಲಿ ಯೋಗ್ಯರ ಕೈಗೆ ಅಧಿಕಾರ ಕೊಡಿ ಅಂತಾ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದ್ರು.
ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಆತಂಕ: ಸಿಎಂ ಸಿದ್ದರಾಮಯ್ಯ
ನರೇಂದ್ರ ಮೋದಿ ಸರ್ಕಾರದಿಂದ ಬಂದಿರೋ ಆತಂಕವನ್ನ ಜನರಿಗೆ ತಿಳಿಸಿದ್ದೇವೆ. ಬಿಜೆಪಿಯವರು ಸಂವಿಧಾನಕ್ಕೆ ಧಕ್ಕೆ ತರ್ತಿದ್ದಾರೆ. ಸಂವಿಧಾನ ಜಾರಿ ಆದಾಗಿನಿಂದಲೂ ಬಿಜೆಪಿಯವರು ವಿರೋಧಿಸ್ತಾನೇ ಬಂದಿದ್ದಾರೆ. ಸಂವಿಧಾನ ಗೊಂದಲದ ಗೂಡು ಅಂತಾ ಆರ್ ಎಸ್ ಎಸ್ ನವ್ರು ಮಾತಾಡಿದ್ದಾರೆ. ಅವರ್ಯಾರು ಸಂವಿಧಾನವನ್ನ ಗೌರವಿಸಲ್ಲ. ಅವ್ರು ಅಧಿಕಾರದಲ್ಲಿದ್ದಾಗ ಯಾವ ರೀತಿ ನಡೆದುಕೊಂಡಿದ್ದಾರೆ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನವನ್ನ ಬದಲಾವಣೆ ಮಾಡೋಕೆ ನಾವು ಬಂದಿರೋದು ಅಂತಾ ಅನಂತ್ ಕುಮಾರ್ ಹೆಗಡೆ ಹೇಳಿದ್ರು. ಇವ್ರ ಮೇಲೆ ಮೋದಿ, ಶಾ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಅರ್ಥ ಏನು ಅಂತಾ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ರು.