ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಹನಿ ನೀರಿಗೂ ಪರದಾಡುತ್ತಿದ್ದಾರೆ. ಬೇಸಿಗೆ ಆರಂಭದಲ್ಲೇ ಕಾವೇರಿ ನೀರಿಗೆ ಪರದಾಡುತ್ತಿದ್ದಾರೆ. ಕಾವೇರಿ ನದಿಯಿಂದ ಬರುತ್ತಿರುವ ನೀರು ಬೆಂಗಳೂರಿಗೆ ಸಾಕಾಗುತ್ತಿಲ್ಲ. ಜನರ ನೀರಿನ ಬವಣೆ ನೀಗಿಸಬೇಕಾದ ಅಧಿಕಾರಿಗಳು ಮಾತ್ರ ಪ್ರಮೋಷನ್ ಚಿಂತೆಯಲ್ಲಿ ಇದ್ದಾರೆ.
ನಾಲ್ಕನೇ ಶನಿವಾರ ಫೆಬ್ರವರಿ 24 ಸರ್ಕಾರಿ ರಜಾ ದಿನವೂ ಜಲಮಂಡಳಿಯಲ್ಲಿ ಅಧಿಕಾರಿಗಳ ಮುಂಬಡ್ತಿ ಆದೇಶ ಹೊರಬಿದ್ದಿದೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಫ್ರೀಡಂ ಟಿವಿಗೆ ಅಧಿಕಾರಿಗಳ ಮಹಾ ಕಳ್ಳಾಟ ದಾಖಲೆ ಸಮೇತ ಸಿಕ್ಕಿದೆ.
ಸರ್ಕಾರದ ರೂಲ್ಸ್ನ್ನೇ ಮರೆತು ಮಂಡಳಿಯ ಡಿ ಗ್ರೂಪ್ ನೌಕರರನ್ನು ಸಿ ನೌಕರರನ್ನಾಗಿ ಮುಂಬಡ್ತಿ ನೀಡಿ ಆದೇಶಕ್ಕೆ ಸಹಿ ಹಾಕಿದ್ದಾರೆ. ನಿನ್ನೆ ಸರ್ಕಾರಿ ರಜೆ ದಿನ ಇದ್ರೂ ಬರೋಬ್ಬರಿ 15 ಸಿಬ್ಬಂದಿಗೆ ಮುಂಬಡ್ತಿ ಆದೇಶ ಹೊರಡಿಸಿದ್ದಾರೆ.
ಹೆಲ್ಪರ್ ಮಹದೇವಸ್ವಾಮಿ,ಸಂಜೀವ ರಾಮು ಪವಾರ,ಕೆ ತ್ಯಾಗು,ಗಿರೀಶ್ ನರಸಿಂಹ,ಕಿರಿಯ ಅನುಚರೆ ,ಎಸ್ ಸರಸ್ವತಿ ಹೆಲ್ಪರ್ ಗುರುಸ್ವಾಮಿ. ಪ್ರೇಮ ಭಾರತಿ ಸೇರಿ ಹಲವರಿಗೆ ರಜೆ ದಿನದಲ್ಲಿ ಮುಂಬಡ್ತಿ ಆದೇಶ ನೀಡಲಾಗಿದೆ. ಬಿರು ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಕರ್ತವ್ಯ ಮೆರೆಯಬೇಕಿದ್ದ ಅಧಿಕಾರಿಗಳು ಮುಂಬಡ್ತಿ ಅದೇಶ ಹೊರಡಿಸುವಲ್ಲಿ ರಜಾ ದಿನವೂ ವಿಶೇಷ ಆಸಕ್ತಿ ಏನು ಇದರ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಅನುಮಾನ ಮೂಡಿಸುತ್ತಿದೆ. ಮಂಡಳಿ ಅಧ್ಯಕ್ಷರು ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಯಿಂದ ಹೊರಡಿಸಿರುವ ಮುಂಬಡ್ತಿ ಆದೇಶದ ಬಗ್ಗೆ ಇನ್ನಾದರೂ ಗಮನ ಹರಿಸುತ್ತಾರಾ? ಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳ ಕಿವಿ ಹಿಂಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.