ಬೆಂಗಳೂರು : ಇಂದು ಹರಿಶ್ಚಂದ್ರ ಘಾಟ್ ಬಳಿ ವಿದ್ಯಾರ್ಥಿಯೊಬ್ಬಳು ಬಿಎಂಟಿಸಿ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ದಳು. ಇದಕ್ಕೆ ಕಾರಣ ಏನು ಅಂತ ಬಿಎಂಟಿಸಿ ತನಿಖೆ ಮಾಡಿದ್ದಾಗ ಅಸಲಿ ಸತ್ಯ ಬಯಲಾಗಿದೆ. ಬಸ್ನಲ್ಲಿ ಇದ್ದ ಸಿಟಿ ಟಿವಿ ಪೊಟೇಜ್ ಪರಿಶೀಲನೆ ಮಾಡಿದ್ದಾಗ ಅಸಲಿ ಸತ್ಯ ಬಯಾಲಾಗಿದೆ. ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಸ್ ಎಡಭಾಗದ ಹಿಂದಿನ ಚಕ್ರಕ್ಕೆ ಆಯಾ ತಪ್ಪಿ ಬಿದ್ದು ಸಾವು ಆಗಿದೆ. ಬಿಎಂಟಿಸಿ ಡ್ರೈವರ್ ದ್ದು ಯಾವುದೇ ತಪ್ಪು ಇಲ್ಲ ಅಂತ ಬಿಎಂಟಿಸಿ ವಿಡಿಯೋ ಸಮೇತ ಸಾಕ್ಷಿ ಬಿಡುಗಡೆ ಮಾಡಿದೆ.

ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಸಿಕ್ಕಾಪಟ್ಟೆ ಬಿಎಂಟಿಸಿ ಬಸ್ ಗಳಿಂದ ಜನ ಸಾಯ್ತಿದ್ದಾರೆ. ಈ ಬಗ್ಗೆ ತಲೆಕೆಡೆಸಿಕೊಂಡು ಬಿಎಂಟಿಸಿ ತನಿಖೆ ನಡೆಸಿ ಅಸಲಿ ಸತ್ಯ ಬಯಲಾಗಿದೆ. ಕೆಲವು ಡ್ರೈವರ್ಸ ಗಳು ಪ್ರಯಾಣಿಕರ ಪಾಲಿಗೆ ಯಮನಂತೆ ಭಾಸವಾಗುತ್ತಿದ್ದಾರೆ ಎನ್ನುವುದು ವಾಸ್ತವ. ಆದರೆ ಇದೇ ಸತ್ಯನಾ..? ಎಲ್ಲಾ ಅಪಘಾತಗಳಿಗೂ ಡ್ರೈವರ್ಸ್ ಗಳೇ ಕಾರಣವಾಗಿರುತ್ತಾರಾ..ಖಂಡಿತಾ ಇಲ್ಲ ಎನ್ನುತ್ತೆ ಬಿಎಂಟಿಸಿ ಆಡಳಿತ ವ್ಯಾಪ್ತಿಯಲ್ಲಿ ನಡೆಸಲಾದ ಸರ್ವೆನೇ ಇಂತದ್ದೊಂದು ಸಂಗತಿಯನ್ನು ಹೊರಹಾಕಿದೆ.
ಬಿಎಂಟಿಸಿ ಬಸ್ ಗಳು ಹೆಚ್ಚೆಚ್ಚು ಅಪಘಾತಕ್ಕೀಡಾಗಲು, ಅದರಲ್ಲೂ ವಾಹನಸವಾರರು, ಪಾದಚಾರಿಗಳು ಸಾವನ್ನಪ್ಪಲು ಡ್ರೈವರ್ಸ್ ಗಳೇ ಕಾರಣ ಎನ್ನುವ ಭಾವನೆ ಸಹಜವಾಗಿದೆ. ಡ್ರೈವರ್ಸ್ ಗಳ ತಪ್ಪು ಅದರಲ್ಲಿ ಇಲ್ಲದಿದ್ದರೂ ಆಡಳಿತ ಮಂಡಳಿ ಘಟನೆ ನಡೆದಾಕ್ಷಣ ಅಂಥಾ ಡ್ರೈವರ್ಸ್ ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ಇಂದು ನಡೆದ ಅಪಘಾತದಲ್ಲಿ ಡ್ರೈವರ್ಸ್ ಗಳ ನಿರ್ಲಕ್ಷ್ಯದ ಚಾಲನೆಯೇ ಕಾರಣವಾಗೋದಿಲ್ಲ ಅಂತ ಬಿಎಂಟಿಸಿ ಪತ್ತೆ ಮಾಡಿದೆ. ಜೊತೆಗೆ ಇತ್ತೀಚೆಗೆ ನಡೆಯುತ್ತಿರುವ ಅಪಘಾತಗಳಿಗೆ ತಮ್ಮ ಡ್ರೈವರ್ಸ್ ಗಳು ಕಾರಣರಲ್ವೇ ಅಲ್ಲ ಎನ್ನುವ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಅದೇನೇ ಆಗಲಿ, ಯಾವುದೇ ಅಪಘಾತಗಳಾದ್ರೂ ಅದಕ್ಕೆ ಬಿಎಂಟಿಸಿ ಡ್ರೈವರ್ಸ್ ಗಳೇ ಕಾರಣ ಎಂದು ಖುಲ್ಲಂಖುಲ್ಲ ಹೇಳುತ್ತಿದ್ದ, ಆ ತಪ್ಪಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದ ಆಡಳಿತ ಮಂಡಳಿ ಇದೀಗ, ಇಲ್ಲ..ಇಲ್ಲ..ಅದಕ್ಕೆ ನಮ್ಮವರು ಮಾತ್ರ ಹೊಣೆಯಲ್ಲ, ವಾಹನ ಸವಾರರು ಹಾಗೂ ದ್ವಿಚಕ್ರ ವಾಹನ ಚಾಲಕರೇ ಕಾರಣ ಎಂದ್ಹೇಳಿ ತಮ್ಮ ಸಿಬ್ಬಂದಿ ಬೆನ್ನಿಗೆ ನಿಲ್ಲುವ ಕೆಲಸ ಮಾಡಿರುವುದು ಬಿಎಂಟಿಸಿ ಡ್ರೈವರ್ಸ್ ಗಳು ಸಿಬ್ಬಂದಿಗೆ ನಿಜಕ್ಕೂ ನೆಮ್ಮದಿ ತಂದಿದೆ.


