Tuesday, December 9, 2025
17.6 C
Bengaluru
Google search engine
LIVE
ಮನೆರಾಜ್ಯತಾಲ್ಲೂಕು ಕಛೇರಿಗಳ ಮೇಲೆ ಲೋಕಾಯುಕ್ತ ದಾಳಿ

ತಾಲ್ಲೂಕು ಕಛೇರಿಗಳ ಮೇಲೆ ಲೋಕಾಯುಕ್ತ ದಾಳಿ

ಆನೇಕಲ್, ಜ.20: ಬೆಂಗಳೂರಿನ‌ ತಾಲೂಕು ಕಚೇರಿಗಳಿಗೆ ದಿಢೀರ್ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ, ಬೆಂಗಳುರು ದಕ್ಷಿಣ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರ, ತಾಲ್ಲೂಕು ಕಛೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಾವಿರಾರು ಕಡತಗಳು ವಿಲೇವಾರಿಯಾಗದೆ ಇರುವುದು ಬೆಳಕಿಗೆ ಬಂದಿದೆ.

ವರ್ಷಗಳ ಹಳೆಯ ಕಡತಗಳು ವಿಲೇವಾರಿಯಾಗದೆ ಇರುವುದರಿಂದ ಹತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಭೂಮಿ ಶಾಖೆಯಲ್ಲಿ ಆಗಿರುವ ಪಹಣಿ ತಿದ್ದುಪಡಿ ಒಳಗೊಂಡಂತೆ ಆನೇಕಲ್ ತಾಲ್ಲೂಕು ಕಛೇರಿಯಲ್ಲೆ ಅತಿ ಹೆಚ್ಚು ಕಡತಗಳು ವಿಲೇವಾರಿಯಾಗದೆ ನಿಂತಿರುವ ಬಗ್ಗೆ ಅನುಮಾನ ವ್ಯಕ್ತ ಪಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆನೇಕಲ್ ವಿಶೇಷ ತಹಸೀಲ್ದಾರ್ ಕರಿಯನಾಯಕ್ ರಿಂದ ಪ್ರತಿ ಕಡತದ ಮಾಹಿತಿ ಪಡೆದರು.

ಬೆಳಗ್ಗೆ ೧೧ ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಪ್ರತಿ ಶಾಖೆಯಲ್ಲು ಕಡತಗಳನ್ನು ಪರಿಶೀಲನೆ ನಡೆಸಿದರು. ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ವಿಳಂಬ , ಹಣಕ್ಕೆ ಬೇಡಿಕೆ ಸೇರಿದಂತೆ ರೈತ ಸಾರ್ವಜನಿಕರಿಂದ ಸಾವಿರಾರು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ದಾಳಿ ಎಂದು ಅರ್ಥೈಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments