ರಾಜ್ಯಸುದ್ದಿ

ಬಸ್​ಗಳ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದ ಇಬ್ಬರು ಆರೋಪಿಗಳು ಅಂದರ್​

ಬೆಂಗಳೂರು : ಬೆಂಗಳೂರಿನಲ್ಲಿ ಮುಂದುವರೆದ ಪುಂಡರ ಹಾವಳಿ ಹೆಚ್ಚಾಗಿದ್ದು. KSRTC ಬಸ್ ಗಳ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದರು. ಮೆಜೆಸ್ಟಿಕ್ ನಲ್ಲಿ ಮಧ್ಯರಾತ್ರಿ ಘಟನೆ ನಡೆದಿದೆ.

ಬೆಂಗಳೂರು – ಮೈಸೂರು ಮಾರ್ಗದ ಬಸ್ ಗಳನ್ನು ಅಡ್ಡಗಟ್ಟಿ ಬಸ್ ನ ಗ್ಲಾಸ್ ಗಳನ್ನ ದೊಣ್ಣೆಗಳಿಂದ ಹೊಡೆದು ಪೀಸ್​ ಪೀಸ್​ ಮಾಡಿದ್ರು. ಕುಡಿದ ನಶೆಯಲ್ಲಿ ಬಸ್ ಗಳಿಗೆ ಮಾತ್ರವಲ್ಲ ಎರಡು ಕಾರು, ಆಟೋಗಳ ಗ್ಲಾಸ್ ಗಳನ್ನು ಹೊಡೆದು ಹಾಕಿದ್ದರು. ಆಟೋದಲ್ಲಿದ್ದ ಐವರು ಗ್ಯಾಂಗ್, ರಾಡ್ ಗಳನ್ನ ಇಟ್ಕೊಂಡಿದ್ರು ಅಂತ ಬಸ್ ಚಾಲಕರ ಆರೋಪದ ಹಿನ್ನೆಲೆ ರಿಯಾಜ್, ಇಮ್ರಾನ್ ಎಂಬ ಇಬ್ಬರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments (0)

Your email address will not be published. Required fields are marked *

Back to top button