ಬಳ್ಳಾರಿ : ನಗರದಲ್ಲಿ ಇಂದು ಪರಿಶಿಷ್ಟ ಪಂಗಡಗಳ ಮುನ್ನವೇ ಸಮಾವೇಶ ನಡೆಯಿತು.. ರಾಜ್ಯ ಎಸ್ಟಿ ಮೋರ್ಚದ ಅಧ್ಯಕ್ಷರಾದ ಬಂಗಾರ ಹನುಮಂತ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಶ್ರೀರಾಮುಲು ಎಸ್ಟಿ ಮೀಸಲಾತಿ ಈ ಬಾರಿ ಮಾತ್ರ ಇರುತ್ತದೆ. ಮುಂದೆ ಮೀಸಲಾತಿ ಇರುತ್ತೋ ಅಥವಾ ಇಲ್ವೋ ಗೊತ್ತಿಲ್ಲ. ನಾನು ಸೋಲಿನ ಮೂಲಕ ರಾಜಕೀಯಕ್ಕೆ ಬಂದವನು, ನನಗೆ ಸೋಲು ಹೊಸತೇನು ಅಲ್ಲ. ಬಿಜೆಪಿ ಪಕ್ಷಕ್ಕೆ ಮತ್ತು ಶ್ರೀರಾಮುಲುಗೆ ದೈವ ಪುರುಷ ಶ್ರೀರಾಮನ ಆಶೀರ್ವಾದ ಇದೆ. ರಾಜ್ಯಸಭಾಗೆ ಆಯ್ಕೆಯಾಗಿರುವ ಬಳ್ಳಾರಿಯ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದ್ದಾರೆ ಎಂದರು. ವಿಧಾನಸೌಧದ ಒಳಗೆ ಈ ರೀತಿಯಾಗಿ ಹೇಳಿಕೆ ಕೂಗುವುದು ದೇಶದ್ರೋಹದ ಕೆಲಸ, ಬಳ್ಳಾರಿಯನ್ನು ಟೇರರಿಸ್ಟ್ ತಾಣವಾಗಿ ಗುರುತಿಸಿಕೊಂಡಿದೆ ಎಂದು ಶ್ರೀರಾಮುಲು ಹೇಳಿದರು..