ಬಳ್ಳಾರಿ : ಚುನಾವಣೆ ನೀತಿ ಸಂಹಿತೆ ಜಾರಿ ಹಾಗೂ ಎಲ್ಲಾ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ಬ್ಯುಸಿ ಹಿನ್ನಲೆ, ನಾಳೆ ನಡೆಯಬೇಕಿದ್ದ ಬಳ್ಳಾರಿ ಮೇಯರ್ ಚುನಾವಣೆ ಮುಂದೂಡಲಾಗಿದೆ. ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಂದ ಆದೇಶ ಹೊರಬಿದ್ದಿದೆ.
ಮೇಯರ್ ಚುನಾವಣೆಗೆ ಮುಂದಿನ ದಿನಾಂಕ ನಿಗದಿ ಪಡಿಸದೇ ಮುಂದಕ್ಕೆ ಹೂಡಿ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡೋದಾಗಿ ಉಲ್ಲೇಖ ಮಾಡಲಾಗಿದೆ. ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ. ಪ್ರಸ್ತುತ ಮೇಯರ್ ಶ್ವೇತಾ ಅವಧಿ ಮುಗಿದ ಹಿನ್ನೆಲೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಕಳೆದ ಚುನಾವಣೆಯಲ್ಲಿ ಸಹ ವಿವಿಧ ಕಾರಣಗಳಿಂದ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮುಂದೂಡಲಾಗಿತ್ತು.