ಬಳ್ಳಾರಿ; ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧಗೊಂಡಿದ್ದು , ನಿನ್ನೆ 2ನೇ ಪಟ್ಟಿ ಬಿಡುಗಡೆ ಮಾಡಿದೆ.ಇದರ ಬೆನ್ನಲ್ಲೇ ಶ್ರೀ ರಾಮುಲು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೈಕಮಾಂಡ್‌ಗೆ ನಮನ ಸಲ್ಲಿಸಿದರು. ವಿಧಾನಸಭೆ ಚುನಾವಣೆ ನಂತರ ಅಜ್ಞಾತ ವಾಸಕ್ಕೆ ನನನ್ನ ಕಳಿಸಿದ್ದರು, ಈಗ ಅಜ್ಞಾತ ವಾಸ ಮುಗಿದಿದೆ ಎಂದರು.
ಬಳ್ಳಾರಿಯಲ್ಲಿ ದ್ವೇಷದ ರಾಜಕಾರಣ, ಮೋಸದ ರಾಜಕಾರಣ ಮಾಡ್ತಿದ್ದಾರೆ.30 ವರ್ಷದ ರಾಜಕಾರಣಿಯಾಗಿ ದುಡಿದ್ದೇನೆ. ಬಳ್ಳಾರಿಯಲ್ಲಿ ರಾಮುಲುನನ್ನ ಪ್ರೀತಿ ಮಾಡೋ ಜನರಿದ್ದಾರೆ, ನಾನು ಆಜಾತಶತ್ರು, ದೇಶದಲ್ಲಿ ಒಳ್ಳೆಯ ವಾತಾವರವಿದೆ, ಮೋದಿ ಮತ್ತೆ ಪ್ರಧಾನಿ ಆಗಬೇಕು ದೇಶದಲ್ಲಿ 400 ಸ್ಥಾನ ಗೆಲ್ಲಬೇಕು ಎಂಬ ಸಂಕಲ್ಪ ಹೊಂದಿದ್ದೇನೆ.ಇದು ರಾಮುಲು ಚುನಾವಣೆಯಲ್ಲ, ದೇಶದ ಚುನಾವಣೆ, ಮೋದಿಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು..
10 ವರ್ಷಗಳ ಕಾಲ ಮೋದಿ ಮಾಡಿದ ಅಭಿವೃದ್ಧಿ ಕೆಲಸ ನೋಡಿ ಮತ ಕೊಡಿ. ಮೂರನೇ ಭಾರಿ ಪ್ರಧಾನ ಮಂತ್ರಿಯಾಗಿ ಮೋದಿ ಆಗ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಸಿನ ದುರಾಡಳಿತವಿದೆ, ದೇಶದಲ್ಲಿ ಕಾಂಗ್ರೆಸ್ ಕುಟುಂಬ ಕಳೆದ 50 ವರ್ಷ ಆಡಳಿತ ಮಾಡಿದೆ.ದೇಶದಲ್ಲಿ 1952ರಿಂದ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.ಬಳ್ಳಾರಿಯಲ್ಲಿ ಸೋನಿಯಾ, ಸುಷ್ಮ ಸ್ಪರ್ಧೆ ಮಾಡಿ, ಗಮನ ಸೆಳೆದಿದ್ರು ನಂತರದ ದಿನಗಳಲ್ಲಿ ಬಿಜೆಪಿ ಭಾವುಟವನ್ನು ಭದ್ರವಾಗಿ ಹಾಕಿದ್ದೇವೆ ಎಂದರು.
ಇನ್ನು ರಾಮುಲು ಸೋಲ್ತಾರೆ ಎಂಬ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆಸಿರುವ ಶ್ರೀ ರಾಮುಲು, ಜನಾರ್ಧನ ರೆಡ್ಡಿ ಬಗ್ಗೆ ನಾನು ಕಮೆಂಟ್ ಮಾಡಲ್ಲ.ಚುನಾವಣೆ ಗೆಲ್ಲುವ ಸಲುವಾಗಿ ಮಾತ್ರ ಕೆಲಸ ಮಾಡ್ತೀನಿ. ಬೇರೆಯರವ ಬಗ್ಗೆ ಕಾಮೆಂಟ್ ಮಾಡಲ್ಲ.ಈ ಚುನಾವಣೆಯಲ್ಲಿ ಗೆದ್ದು ಉತ್ತರ ಕೊಡ್ತೀನಿ .ನನ್ನ ಸೋಲಿಸಬೇಕು ಅಂತ ಕೆಲ ನಾಯಕರು ಮಾತನಾಡುತ್ತಾರೆ, ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ.ಬೇರೆ ಬೇರೆ ಕಾರಣಗಳಿಂದ ನನಗೆ ಸೋಲಾಗಿದೆ, ಆದರೆ ಈ ಭಾರಿ ಗೆದ್ದೆ ಗೆಲ್ಲುತ್ತೇನೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.