ಬಳ್ಳಾರಿ : ಬಳ್ಳಾರಿ ತಾಲೂಕಿನ ಸಿಂಧವಾಳ ಚೆಕ್ ಪೋಸ್ಟ್ ಬಳಿ ದಾಖಲೆ ರಹಿತ ಅಪಾರ ಪ್ರಮಾಣದ ಬೆಳ್ಳಿ ಮತ್ತು ಹಣ ಸೀಜ್ ಮಾಡಲಾಗಿದೆ. ಆಂಧ್ರದ ಗಡಿ ಚೆಕ್ ಪೋಸ್ಟ್ ಬಳಿ 26 ಕೆಜಿ ಬೆಳ್ಳಿ ಹಾಗೂ 3 ಲಕ್ಷ 55 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಬಳ್ಳಾರಿಯಿಂದ ಆಂಧ್ರದ ಅದೋನಿ ಕಡೆ ಸಾಗಿಸುತ್ತಿದ್ದ ದಾಖಲೆ ರಹಿತ ಬೆಳ್ಳಿ ಮತ್ತು ನಗದನ್ನು ಚುನಾವಣೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳಿಂದ ಸೀಜ್ ಮಾಡಿದ್ದು, ನಗದು ಮತ್ತು ಬೆಳ್ಳಿ ವಶಕ್ಕೆ ಪಡೆದು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು. ಆಂಧ್ರ ಪಾಸಿಂಗ್ ಇರೊ AP-21, AX-9388 ನಂಬರ್ ಪ್ಲೇಟ್ ಕಾರಿನಲ್ಲಿ ಬೆಳ್ಳಿ ಮತ್ತು ನಗದು ಸಾಗಿಸುತ್ತಿದ್ದು, ಚುನಾವಣೆ ಅಧಿಕಾರಿಗಳಿಂದ್ ಸೀಜ್ ಮಾಡಿದ್ದಾರೆ. ಮೋಕಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.