ಬಾಗಲಕೋಟೆ : ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿಂದು ಶ್ರೀರಾಮ ತಾರಕ ಹೋಮವನ್ನ ಆಯೋಜನೆ ಮಾಡಲಾಗಿತ್ತು.

ಬಾಗಲಕೋಟೆಯ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ನಡೆದ ಶ್ರೀರಾಮ ತಾರಕ ಹೋಮದಲ್ಲಿ,108 ದಂಪತಿಗಳು ಹೋಮದಲ್ಲಿ ಭಾಗಿಯಾದ್ರು.
ನಗರದ ಗೌರಿಶಂಕರ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ಪಂಡಿತ ನಾಗಸಂಪಿಗೆ ಆಚಾರ್ಯರ ತಂಡದಿಂದ ಶ್ರೀರಾಮ ತಾರಕ ಹೋಮ ಯಶಸ್ಬಿಯಾಗಿ ಜರುಗಿತು.
ಅಯೋಧ್ಯೆಯ ಶ್ರೀರಾಮಮಂದಿರಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲೆಂದು ಪ್ರಾರ್ಥಿಸಲಾಯಿತು.ನಗರದ ಬಿಜೆಪಿಯ ಮುಖಂಡರು,ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೋಮದಲ್ಲಿ ಭಾಗಿಯಾದ್ರು.


