ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿ ಅಮ್ಮನವರ ಮಹಾರಥೋತ್ಸವ ಶ್ರದ್ಧಾಭಕ್ತಿಗಳಿಂದ ಜರುಗಿತು.ಬಣದ ಹುಣ್ಣಿಮೆ ಹಿನ್ನೆಲೆ ಸಂಜೆ ಐದು ಗಂಟೆಗೆ ಜರುಗಿದ ಮಹಾರಥೋತ್ಸವಕ್ಕೆ ರಾಜ್ಯ-ಹೊರ ರಾಜ್ಯಗಳಿಂದ ಆಗಮಿಸಿದ್ದ ಲಕ್ಷಾಂತರ ಜನ ಭಕ್ತರು ಸಾಕ್ಷಿಯಾದ್ರು.
ಉತ್ತತ್ತಿಗಳನ್ನ ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು..ದಕ್ಷಿಣ ಭಾರತದಲ್ಲೇ ಸುಪ್ರಸಿದ್ಧ ಜಾತ್ರೆ ಎಂದು ಖ್ಯಾತಿ ಪಡೆದಿರುವ ಈ ಜಾತ್ರೆ ಇನ್ನೂ ಒಂದು ತಿಂಗಳುಗಳ ಕಾಲನಡೆಯಲಿದೆ.ಹೀಗಾಗಿ ಈ ಜಾತ್ರೆಯನ್ನ ತಿಂಗಳ ಜಾತ್ರೆಯೆಂದೂ ಕರೆಯುತ್ತಾರೆ.ಈ ಜಾತ್ರೆಯಲ್ಲಿ ತಂದೆತಾಯಿ ಬಿಟ್ಟು ಎಲ್ಲವೂ ಸಿಗುತ್ತೆ ಎನ್ನುವ ಮಾತಿದೆ.ಈ ಜಾತ್ರೆಯಲ್ಲಿ ವ್ಯಾಪಾರ ವಹಿವಾಟ ಬಲು ಜೋರಾಗಿರುತ್ತೆ.ವಿವಿಧ ನಾಟಕ ಕಂಪನಿಗಳು ಕೂಡ ಜಾತ್ರೆಗೆ ಲಗ್ಗೆ ಇಟ್ಟು ಜಲಾಸೇವೆಯಲ್ಲಿ ತೊಡಗುತ್ತವೆ.ಕಲಾವಿದರು ಬನಶಂಕರಿ ಅಮ್ಮನವರ ಜಾತ್ರೆ ನೆಚ್ಚಿಕೊಂಡೇ ನಾಟಕ ಪ್ರದರ್ಶನ ನೀಡ್ತಾರೆ.ಈ ಬಾರಿಯೂ ಕೂಡ ಜಾತ್ರೆ ಅದ್ದೂರಿಯಾಗಿ ಜರುಗಿದ್ದು ಲಕ್ಷಾಂತರ ಭಕ್ತಗಣ ಸಾಕ್ಷಿಯಾಗಿದೆ.