Thursday, January 29, 2026
18 C
Bengaluru
Google search engine
LIVE
ಮನೆUncategorizedಬಸ್​ನಲ್ಲಿ ಪ್ರಯಾಣಿಸುವ ಮುನ್ನ ಹುಷಾರ್.!

ಬಸ್​ನಲ್ಲಿ ಪ್ರಯಾಣಿಸುವ ಮುನ್ನ ಹುಷಾರ್.!

ಬಾಗಲಕೋಟೆ : ನೀವೇನಾದ್ರು ಬಸ್ ನಲ್ಲಿ ಪ್ರಯಾಣಿಸುತ್ತಿರಾ ? ಆಗಾದ್ರೆ ಈ ಸುದ್ದಿ ನೋಡಿ. ಬಸ್ ಹತ್ತುವ ಭರದಲ್ಲಿ‌ ನೂಕು ನುಗ್ಗಲು ಸಂಭವಿಸಿ ಬಸ್ ಚಕ್ರದಡಿ ಸಿಲುಕಿ ಚಾಲಕ ಕಂ ನಿರ್ವಾಹಕ ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ‌ನವನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಗದ್ಯಪ್ಪ ಗಡ್ಡಿ ಮೃತ ವ್ಯಕ್ತಿ .ಗದ್ಯಪ್ಪ ಗಡ್ಡಿ ಕೌಜಗನೂರು ಗ್ರಾಮದ ನಿವಾಸಿಯಾಗಿದ್ದು, ಬಾಗಲಕೋಟೆ ‌ಜಿಲ್ಲೆ ಹುನಗುಂದ ತಾಲ್ಲೂಕಿನ ಗ್ರಾಮದರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಕೆ.ಎಸ್.ಆರ್.ಟಿ.ಸಿ ಡಿಪೊದಲ್ಲಿ ಕೆಲಸ ಮಾಡುತ್ತಿದ್ದರು.

ಆದರೆ ಬಾಗಲಕೋಟೆಯಿಂದ ಇಳಕಲ್ ಕಡೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಏರುವ ಸಮಯದಲ್ಲಿ ನೂಕು ನುಗ್ಗಲಾಗಿ ಬಸ್​ ಚಕ್ರದಡಿ ಸಿಲುಕಿ ಗದ್ಯಪ್ಪ ಗಡ್ಡಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments