ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ್ದಾರೆ. ಇಂತಹ ವೇಳೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 13ಲಕ್ಷ ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಶೋಕನಗರ ಪೊಲೀಸರಿಂದ ಈ ಹಣ ಜಪ್ತಿ ಮಾಡಲಾಗಿದೆ. ಚುನಾವಣಾ ಚೆಕ್ ಪೋಸ್ಟ್ ಪರಿಶೀಲನೆ ವೇಳೆ ಈ ಹಣ ಪತ್ತೆಯಾಗಿದೆ.
ನಿನ್ನೆ ರಾತ್ರಿ ಪರಿಶೀಲನೆ ಈ ವೇಳೆ ಹಣ ಪತ್ತೆಯಾಗಿದ್ದು, ದಾಖಲೆಯಿಲ್ಲದೆ KA53 MH0123 ಎಂಬ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಪೊಲೀಸರು ಇಂತಹ ಹದಿಮೂರು ಲಕ್ಷ ಹಣ ವಶಕ್ಕೆ ಪಡೆದು, ದಾಖಲಾತಿ ಪರಿಶೀಲನೆ ಮಾಡುತ್ತಿದ್ದಾರೆ.