ಧಾರವಾಡ; ಕನ್ನಡ ನಾಮ ಫಲಕ ಕಡ್ಡಾಯ ಹೋರಾಟ. ರಾಜ್ಯ ರಾಜ್ಯಧಾನಿಯಲ್ಲಿ ಸದ್ದು ಮಾಡಿದ ವಾಣಿಜ್ಯ ಮಳಿಗೆಗೆ ಕನ್ನಡ ನಾಮ ಫಲಕ ಕಡ್ಡಾಯ ವಿಚಾರ, ಈಗ ಧಾರವಾಡದಲ್ಲಿಯೂ ಹೋರಾಟ ಆರಂಭವಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿರುವ ವಾಜ್ಯ ಮಳಿಗೆಗಳಲ್ಲಿ ಕನ್ನಡ ನಾಪ ಫಲ ಕಡ್ಡಾಯ ಮಾಡಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಲು ಅಗ್ರಹಿಸಿ ಮನವಿ ನೀಡಲಾಯಿತು. ಧಾರವಾಡದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಕಚೇರಿಗೆ ಬಂದ, ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಪಾಲಿಕೆ ಕಚೇರಿಯ ಆಯುಕ್ತರಿಗೆ ಮನವಿ ನೀಡಿದ್ದರು.

ಈಗಾಗಲೇ ಬೆಂಗಳೂರಿನಲ್ಲಿ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮ ಫಲಕ ಕಡ್ಡಾಯಕ್ಕೆ ಅಗ್ರಹಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ಜೊತೆಗೆ ಅಭಿಯಾನ ಮಾಡುತ್ತಿವೆ. ಹಾಗಾಗಿ ಹುಬ್ಬಳ್ಳಿ ಧಾರವಾಡದಲ್ಲಿಯು ಕನ್ನಡ ನಾಮ ಫಲಕ ಕಡ್ಡಾಯವಾಗಿ ಮಾಡಿ ಆದೇಶ ಹೊರಡಿಸುವ ಅವಶ್ಯವಿದೆ. ಈ ಕುರಿತು ಪಾಲಿಕೆ ಆಯುಲ್ತರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.