ನೆರೆಯ ಆಂಧ್ರಪ್ರದೇಶದಲ್ಲಿ ಇದೀಗ ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆ ಕಾವು ಏರತೊಡಗಿದೆ. ಇಂತಹ ಸಂದರ್ಭದಲ್ಲಿಯೇ ಅನಂತಪುರ ಜಿಲ್ಲೆಯ ಉರುವಕೊಂಡ (Uruvakonda) ಕ್ಷೇತ್ರದ ತೆಲುಗುದೇಶಂ ಶಾಸಕ ಪಯ್ಯಾವುಲಾ ಕೇಶವ್ (Payyavula Keshav)ಅವರು ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡುವ ವಿಡಿಯೋ ಒಂದು ವೈರಲ್ ಆಗಿದೆ.
ಪಯ್ಯಾವುಲ ಕೇಶವ್.. ಮೂಲತಃ ಬಳ್ಳಾರಿ(Bellary)ಯವರು.. ಆದರೆ, ಆಂಧ್ರದಲ್ಲಿ ಸೆಟಲ್ ಆಗಿ ರಾಜಕಾರಣಿಯಾಗಿದ್ದಾರೆ. ಬಳ್ಳಾರಿಗೆ 45 ಕಿಲೋಮೀಟರ್ ದೂರ ಇರುವ ಉರುವಕೊಂಡ ಗಡಿ ಪ್ರದೇಶವಾದ ಕಾರಣ ಇಲ್ಲಿ ಕನ್ನಡ ಭಾಷಿಕರ ಸಂಖ್ಯೆ ಹೆಚ್ಚಿದೆ.
ಹೀಗಾಗಿ ಕನ್ನಡ ಭಾಷಿಕರ ಜೊತೆ ತೆಲುಗುದೇಶಂ ಶಾಸಕ ಪಯ್ಯಾವುಲಾ ಕೇಶವ್ ಕನ್ನಡದಲ್ಲಿ ಮಾತನಾಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.